ಹೊಸದಿಲ್ಲಿ: ಪೆಟ್ರೋಲು ಬೆಲೆ ದಿನಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದ್ದರೆ, ಇನ್ನೊಂದೆಡೆ ರೂಪಾಯಿ ಮೌಲ್ಯವು ದಾಖಲೆ ಮಟ್ಟದಲ್ಲಿ ಕುಸಿಯುತ್ತಾ ಹೋಗಿತ್ತು. ಆದರೆ ಈಗ ರೂಪಾಯಿ ವಿನಿಮಯದ ದರದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ. ಒಂಬತ್ತು ಪೈಸೆ ಚೇತರಿಕೆಯಾಗಿದ್ದು ಡಾಲರಿನ ಮುಂದೆ 71.66ಪೈಸೆ ಗುರುವಾರ ದಾಖಲಾಗಿದೆ.

ರಫ್ತು ಮತ್ತು ಡಾಲರ್ ಮಾರಾಟ ರೂಪಾಯಿ ದರದಲ್ಲಿ ಚೇತರಿಕೆಗೆ ಕಾರಣ ಎಂದು ತಿಳಿದು ಬಂದಿದ್ದು ಮತ್ತು ತೈಲದರ ಕಡಿಮೆಯಾದದ್ದು ಇತರ ಕರೆನ್ಸಿಯ ಮುಂದೆ ಡಾಲರ್ ಮೌಲ್ಯ ಕುಸಿತಕ್ಕೆ ಇನ್ನೊಂದು ಕಾರಣ ಎಂದು ಹೇಳಳಾಗಿದೆ. ಚೀನ-ಅಮೆರಿಕಗಳ ವ್ಯಾಪಾರ ಯುದ್ಧದ ಕುರಿತ ಆತಂಕ ರೂಪಾಯಿಯನ್ನು ರಕ್ಷಿಸಿದೆ.

ಬುಧವಾರ 17 ಪೈಸೆ ನಷ್ಟದೊಂದಿಗೆ ರೂಪಾಯಿ ವ್ಯಾಪಾರ ಕೊನೆಯಾಇತುತ. ಡಾಲರ್‍ಗೆ71.75 ರೂಪಾಯಿ ಕಳೆದ ದಿವಸ ಇತ್ತು. ಇದೇವೇಳೆ ,ಭಾರತದ ಶೇರು ಮಾರುಕಟಟೆಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಮುಂಬೈ ಸೆನ್ಸೆಕ್ಸ್ 47 ಪಾಯಿಂಟು ಸಾಧನೆ ದಾಖಲಿಸಿದ್ದರೆ ನಿಫ್ಟ್ 26ಪಾಯಿಂಟು ದಾಖಲಾಗಿದೆ.

Leave a Reply