ಮುಂಬಯಿ: ಭಾರತ‌ ತಂಡದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ತನ್ನ ಮಗಳನ್ನು ಮದುವೆ ಮಾಡಿಸಿ ಕೊಡಲು ದುಷ್ಕರ್ಮಿಯೊಬ್ಬ ಬೆದರಿಕೆ‌ ಹಾಕಿದ್ದು ವರದಿಯಾಗಿದೆ.

ಪಶ್ಚಿಮ ಬಂಗಾಳ ಮೂಲದ ದೇವ್ ಕುಮಾರ್ ಮೈಟಿ ಎನ್ನುವಾತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ‌ ನಿವಾಸದ ಬಳಿ ತೆರೆಳಿ ತನ್ನ ಮಗಳು ಸಾರ ತೆಂಡೂಲ್ಕರ್ ಮದುವೆ ಮಾಡಿಕೊಡಿಸಲು ಬೆದರಿಕೆ ಹಾಕಿದ್ದು ಎಂದು ಹೇಳಲಾಗಿದ್ದು, ಈತ ಪಶ್ಚಿಮ ಬಂಗಾಳ ಪುರ್ಬಾ ಮೆಡಿನಿಪುರ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. 32 ವರ್ಷದ ಈತ ಇತ್ತೀಚೆಗೆ ಹಲವು ದಿನಗಳಿಂದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಸಾರ ತೆಂಡೂಲ್ಕರ್ ಬಗ್ಗೆ ಕಾಮೆಂಟ್, ‌ಪೋಸ್ಟುಗಳನ್ನು ಹಾಕುತ್ತಿದ್ದ ಎನ್ನಲಾಗಿದೆ.

ಆದಾಗ್ಯೂ ಈ ಹಿಂದೆ ಸಾರ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ತೆರೆದು ರಾದ್ದಾಂತ ನಡೆಸಿದ್ದ‌ ಎಂದು ಆರೋಪಿಸಲಾಗಿದೆ.‌ ಸದ್ಯ ಈ ದುಷ್ಕರ್ಮಿ ಮುಂಬಯಿ ಪೋಲಿಸರ ಆತಿಥ್ಯದಲ್ಲಿದ್ದಾನೆ ಎಂದು ವರದಿಯಾಗಿದೆ.

Leave a Reply