ಮುಂಬೈ : ಇಂಗ್ಲೆಂಡ್‌ನಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲು ಭಾರತ ಸಂಘಟಿತ ಹೋರಾಟ ನಡೆಸಬೇಕೆಂದು ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಸಮತೋಲನದಿಂದ ಕೂಡಿದ್ದು, ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ತಂಡಕ್ಕೆ ಇದೆ. ಇದಕ್ಕೆ ತಂಡದ ಪ್ರತಿಯೊಬ್ಬ ಆಟಗಾರರರು ಕಠಿಣ ಪರಿಶ್ರಮಪಡಬೇಕೆಂದರು. ಯಾವುದೇ ತಂಡ ಕೆಲವೇ ಆಟಗಾರರ ಮೇಲೆ ಅವಲಂಭಿತವಾಗಿರಬಾರದು. ಪ್ರತಿಯೊಬ್ಬ ಆಟಗಾರ ತನ್ನ ಜವಾಬ್ದಾರಿಯನ್ನು ಅರಿತು ತಂಡದ ಗೆಲುವಿಗಾಗಿ ಕೊನೆಯ ಎಸೆತದ ವರೆಗೂ ಹೋರಾಟ ನಡೆಸಬೇಕು, ಆಗಲೇ ಜಯ ಲಭಿಸಲು ಸಾಧ್ಯ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದರು.
“ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದು, ಎಂತಹ ಪರಿಸ್ಥಿತಿಯಲ್ಲಿ ವಿಕೆಟ್ ಬಳಿ ನಿಂತು ತಂಡದ ಗೆಲುವಿಗಾಗಿ ಶ್ರಮಿಸುತ್ತಾರೆ. ಅವರಂತೆ ಇತರ ಆಟಗಾರರರು ಕೂಡ ಎಚ್ಚರಿಕೆ ಆಟವಾಡಿ ನಾಯಕನಿಗೆ ಬಲ ನೀಡುವಂತೆ ಅವರು ಸಲಹೆ ಮಾಡಿದರು.

ಏಕಾಂಗಿಯಾಗಿ ಯಾವುದೇ ಆಟಗಾರನಿಂದ ವಿಶ್ವಕಪ್ ಗೆಲ್ಲುವುದು ಅಸಾಧ್ಯ ಕಠಿಣ ಪರಿಸ್ಥಿತಿಗಳಲ್ಲಿ ಎಲ್ಲರ ಪರಿಶ್ರಮ ಅಗತ್ಯವಾಗಿರುತ್ತದೆ ಅದು ನಡೆಯದಿದ್ದರೆ ತಂಡ ನಿರಾಶೆಗೊಳಾಗಾಗುತ್ತದೆ ಎಂದು ಸಚಿನ್ ತೆಂಡೂಲ್ಕರ್, ಕೊಹ್ಲಿ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ಭಾರತದ ಬ್ಯಾಟಿಂಗ್ ಸಾಕಷ್ಟು ಬಲಿಷ್ಟವಾಗಿದೆ. ಜೊತೆಗೆ ಬೌಲಿಂಗ್ ವಿಭಾಗ ಕೂಡ ಬಲಿಷ್ಟವಾಗಿದೆ. ವಿಶೇಷವಾಗಿ ತಂಡದ ವೇಗದ ಬೌಲರ್‌ಗಳು ಎದುರಾಳಿ ತಂಡಗಳಿಗೆ ಅಪಾಯಕಾರಿ ಆಗಬಲ್ಲರು ಎಂದು ಲಿಟಲ್ ಮಾಸ್ತರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟರು.

Leave a Reply