AppleMark

ಜಾದವ್ ಪುರ ಯುನಿವರ್ಸಿಟಿ ನೀಡಿದ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ಸಚಿನ್ ತೆಂಡೂಲ್ಕರ್ ನಿರಾಕರಿಸಿದ್ದಾರೆ. ಧಾರ್ಮಿಕ ಪ್ರಜ್ಞೆಯ ಕಾರಣದಿಂದ ಈ ಪುರಸ್ಕಾರ ನಿರಾಕರಿಸಿರುವುದಾಗಿ ಸಚಿನ್ ಈಮೈಲ್ ಮೂಲಕ ಸ್ಪಷ್ಟಪಡಿಸಿದ್ದಾರೆಂದು ಸುರಂಜನ್ ದಾಸ್ ಹೆಳಿದ್ದಾರೆ.

ಇಂತಹ ಪ್ರಶಸ್ತಿ ಪುರಸ್ಕಾರ ಪಡೆಯುವುದಿಲ್ಲವೆಂದೂ ಈ ಹಿಂದೆ ಆಕ್ಸ್‍ಫರ್ಡ್ ಯುನಿವರ್ಸಿಟಿ ಕೂಡಾ ಡಾಕ್ಟರೇಟ್ ನೀಡಿದ್ದನ್ನು ಪಡೆಯಲು ನಾನು ನಿರಾಕರಿಸಿದ್ದೆ ಎಂದು ಸಚಿನ್ ಉತ್ತರಿಸಿದ್ದಾರೆ.

ತಾನು ಕಲಿತು ಅಭ್ಯಾಸ ಮಾಡದೇ ಇದ್ದುದರ ಹೆಸರಿನ ಪುರಸ್ಕಾರ ಸ್ವೀಕರಿಸುವುದು ಧಾರ್ಮಿಕವಾಗಿ ತಪ್ಪಾಗುತ್ತದೆ ಎಂದೂ ಅವರು ಹೇಳಿದರು. 2011 ರಲ್ಲಿ ರಾಜೀವ್ ಗಾಂಧಿ ವಿ.ವಿ. ಯು ಡಾಕ್ಟರೇಟ್ ನೀಡಿದಾಗಲೂ ಸಚಿನ್ ಇದೇ ರೀತಿ ನಿರಾಕರಿಸಿದ್ದರು.

Leave a Reply