ಬೆಂಗಳೂರು: ಸಾಲು ಮರದ ತಿಮ್ಮಕ್ಕ ಸರಕಾರ ನೀಡಿದ ಹತ್ತು ಲಕ್ಷ ಪರಿಹಾರವನ್ನು ನಿರಾಕರಿಸಿದ್ದು, ಯಾರಿಗೂ ಜಾತಿ ಆಧಾರದ ಮೇಲೆ ಪುರಸ್ಕಾರಗಳನ್ನು ನೀಡಬಾರದು ಪತ್ರದ ಮೂಲಕ ತಿಳಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ತಿಮ್ಮಕ್ಕರಿಗೆ ಸಿದ್ದರಾಮಯ್ಯ ರವರು ಹತ್ತು ಲಕ್ಷ ಹಣ ನೀಡಲು ಮುಂದಾಗಿದ್ದರು.

ಸಾಲು ಮರದ ತಿಮ್ಮಕ್ಕ ಸರಕಾರದ ಮುಂದೆ ಹಲವಾರು ಬೇಡಿಕೆಯನ್ನು ಇಟ್ಟಿದ್ದರು. ಆದರೆ ಅವುಗಳು ನೆರವೇರಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದಾರೆ.

ಸರ್ಕಾರ ನೀಡಿದ್ದ ಈ ಹಣವನ್ನಾಗಲೀ ಅಥವಾ ಪಿಂಚಣಿ ಹಣವನ್ನಾಗಲಿ ಸಾಲುಮರದ ತಿಮ್ಮಕ್ಕ ಅವರು ಬಳಕೆ ಮಾಡಿಕೊಂಡಿಲ್ಲ.

ದಲಿತ ಮಹಿಳೆಯಾಗಿರುವ ಕಾರಣ ನಾನು ಈ ಪರಿಸ್ಥಿತಿಯಲ್ಲಿದ್ದೇನೆ. ಯಾವುದೇ ವ್ಯಕ್ತಿಯನ್ನಾದರೂ ಜಾತಿ ಆಧಾರತ ಮೇಲೆ ಗುರುತಿಸುವುದು ಅಥವಾ ಪುರಸ್ಕರಿಸುವುದು ಸರಿಯಲ್ಲ. ನನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ನನ್ನ ದತ್ತು ಪುತ್ರ ನನ್ನನ್ನು ಹಾಗೂ ನನ್ನ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರೀತಿ ಹಾಗೂ ಕಾಳಜಿಯಿಂದಲೇ ಇಂದಿಗೂ ನಾನು ಬದುಕಿದ್ದೇನೆಂದು ತಿಮ್ಮಕ್ಕ ಅವರ ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸರ್ಕಾರ ಹಣ ಹಾಗೂ ಭೂಮಿ ನೀಡುವ ಕುರಿತು ಭರವಸೆಗಳನ್ನು ನೀಡಿತ್ತು. ಆದರೆ, ಆ ಭರವಸೆಗಳು ಈಡೇರಿಲ್ಲ ಎಂದಿರುವ ತಿಮ್ಮಕ್ಕ ಪರಿಹಾರ ಧನವನ್ನು ನಿರಾಕರಿಸಿದ್ದಾರೆ.

Leave a Reply