ಢಾಕಾ: ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ 6 ತಿಂಗಳ ಕಾಲ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ. ಭಾರತದ ಖ್ಯಾತ ಕ್ರೆಕೆಟ್ ತಾರೆ ಸ್ ಶುಐಬ್ ಮಲಿಕ್ ರವರ ಪತ್ನಿಯೂ ಮತ್ತು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರವರಿಗೆ ಕಿರುಕುಳ ನೀಡಿರುವುದು ಅವರ ಮೇಲಿರುವ ಆರೋಪ.

ಬಾಂಗ್ಲಾ ಮಾಧ್ಯಮದ ವರದಿಯ ಪ್ರಕಾರ , 2014 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಹಾಗೂ ಪತ್ನಿ ಸಾನಿಯಾ ಮಿರ್ಜಾ ಬಾಂಗ್ಲಾ ದೇಶಕ್ಕೆ ಪಂದ್ಯವೊಂದಕ್ಕೆ ಆಗಮಿಸಿದ್ದಾಗ ಮೈದಾನವನ್ನು ಪ್ರವೇಶಿಸುತ್ತಿರುವಾಗ ಶಬ್ಬೀರ್ ರೆಹಮಾನ್ ಸಾನಿಯಾರನ್ನು ಚುಡಾಯಿಸಿದ್ದರು ಎನ್ನಲಾಗಿದೆ. ಇದರಿಂದ ಕುಪಿತರಾದ ಪತಿ ಶೋಯಬ್ ಮಲ್ಲಿಕ್ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಢಾಕಾ ಮೆಟ್ರೋ ಪೊಲೀಸ್ ಮುಖ್ಯಸ್ಥರಿಗೆ ಲಿಖಿತ ದೂರು ನೀಡಿದ್ದರು.

ವಿವಾದಾತ್ಮಕ ಕೆಲಸಗಳಿಗೆ ಕ್ರಿಕೆಟಿಗ ರಹಮಾನ್ ಬಹಳ ಬಾರಿ ಹೆಸರುವಾಸಿಯಾಗಿದ್ದು, ಈ ಮೊದಲು ಖಾಸಗಿ ಹೋಟೆಲ್‍ಗೆ ಅನುಮತಿ ಇಲ್ಲದೆ ಮಹಿಳೆಯನ್ನು ಕರೆದುಕೊಂಡು ಬಂದು ಕೊಠಡಿಯಲ್ಲಿರಿಸಿಕೊಂಡಿದ್ದಕ್ಕೆ 6 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. 2017 ರಲ್ಲಿ, ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಪರಿಣಾಮವಾಗಿ ಬಾಂಗ್ಲಾದೇಶದ ಏಷ್ಯಾ ಕಪ್ ತಂಡದಿಂದ ಹೊರಗುಳಿದರು.

Leave a Reply