ನಾನು : ನನ್ನ ಅಲ್ಪ ಜ್ಞಾನದ ಬಗೆ ಭಯವಿದೆ. ಪ್ರತಿ ವಿಷಯದಲ್ಲೂ ಜ್ಞಾನದ ಕೊರತೆ ಎದ್ದು ಕಾಣುತ್ತ ಇದೆ. ಕಲಿಯುವ ಹಂಬಲ ಇದ್ದರೂ
ಕಲಿಯಲು ಸಾಧ್ಯವಾಗುತ್ತಿಲ್ಲ.
ಹೇಳಿ ಗುರುಗಳೇ ಏನು ಮಾಡಲಿ?

ಸಂತ : ಕಲಿದಂತೆ ನಡೆಯಲು ಕಲಿ
ಮುಂದಿನ ಜ್ಞಾನವು ನಿನ್ನನ್ನು ಹುಡುಕಿ ಬರುವುದು.
ಮನಸ್ಸಿನಲ್ಲಿರುವ ಅಹಂಕಾರ ತೊಡೆದು ಹಾಕು.
ವಿನಯವೇ ವಿದ್ಯೆಯ ಹೆಗ್ಗುರು.
ಕೇಳು ಮಗುವೆ, ಜ್ಞಾನದ ಒಡೆಯನಾದ ಸರ್ವಜ್ಞ ದೇವನ ಮೊರೆ ಇಡು. ಅಳುವ ಮಗುವಿಗೆ ತಾಯಿಯ ಹಾಲು ಕುಡಿಯಲು ಕಲಿಸಿದ ಜ್ಞಾನ ಅವನದೇ. ಆ ಮಗುವಿಗೆ ನಗಲು ಕಲಿಸುವುದು ಅವನೇ.

ಲೇಖಕರು : ಮೀಡಿಯೇಟರ್

Leave a Reply