ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ವಿದೇಶಿಗಳು ದುಡಿಯುವ ವಿಭಾಗಗಳಲ್ಲಿ ಆರೋಗ್ಯ ರಂಗವೂ ಒಂದು. ಆರೋಗ್ಯ ರಂಗದಲ್ಲಿ ಸುಮಾರು ಹತ್ತು ಲಕ್ಷ ವಿದೇಶಿಗಳು ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಈ ಆರೋಗ್ಯ ರಂಗದಲ್ಲಿಯೂ ಸ್ವದೇಶಿಗಳನ್ನು ಮಾತ್ರ ನೇಮಿಸುವಂತಹ ಪ್ರಕ್ರಿಯೆ ಪ್ರಾರಂಭಿಸುವ ಸೂಚನೆಯಿದೆ. ರಾಷ್ಟ್ರೀಯ ರಜಾ ದಿನ ಮುಗಿದ ಕೂಡಲೇ ಪ್ರಾರಂಭವಾಗುವ ಶೂರ ಸಮಿತಿಯ ಸಭೆಯ ಮೊದಲ ದಿನವೇ ಈ ವಿಚಾರ ಪರಿಗಣಿಸಲಾಗವುದೆಂದು ಅದಕ್ಕೆ ಸಂಬಂಧಿಸಿದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ರಾಜಧಾನಿಯ ಕಿಂಗ್ ಫೈಝಲ್ ಸ್ಪೆಶಾಲಿಟಿ ಆಸ್ಪತ್ರೆಯ ವಾರ್ಷಿಕ ವರದಿಯನ್ನು ಅವಲೋಕಿಸಿ ಕಾರ್ಯ ಪ್ರವೃತ್ತವಾಗಲಿದೆ.

Leave a Reply