ಕಾರವಾರ: ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಲೈಫ್ ಗಾರ್ಡ್ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್ ನಲ್ಲಿ ನಡೆದಿದೆ.

ಗಗನ್ (18) ರಕ್ಷಿಸಲ್ಪಟ್ಟ ವಿದ್ಯಾರ್ಥಿ.
ಶಿವಮೊಗ್ಗದ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು
ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಇಂದು ಮುರಡೇಶ್ವರ ಕಡಲ ತೀರದಲ್ಲಿ ಈಜುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಗಗನ್ ಕೊಚ್ಚಿ ಹೋಗಿದ್ದನು.


ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಲೈಫ್ ಗಾರ್ಡ ರೋಹಿತ್ ಹರಿಕಾಂತ, ಶಶಿಧರ, ಮತ್ತು ಬೋಟ್ ಸಿಬ್ಬಂದಿಗಳು ತಕ್ಷಣ ಬೋಟ್ ತೆಗೆದುಕೊಂಡು ಹೋಗಿ ಗಗನ್‍ನನ್ನು ರಕ್ಷಿಸಿದ್ದು ಶ್ಲಾಘನೀಯವಾಗಿದೆ.

Leave a Reply