ಕುರಿಚ್ಯಾರ್‍ಮಲ(ಕೇರಳ): ಗುಡ್ಡ ಜರಿತದಿಂದ ಇಲ್ಲಿನ ಸರಕಾರಿ ಶಾಲೆ ಅರ್ಧಾಂಶ ಮಣ್ಣಿನಿಂದ ಹೂತ ಸ್ಥಿತಿಯಲ್ಲಿದ್ದುದರಿಂದ ಮೊಹಲ್ಲಾ ಸಮಿತಿ ಶಾಲೆ ತೆರೆಯಲು ತಮ್ಮ ಮದ್ರಸಾದಲ್ಲಿ ಅವಕಾಶ ಮಾಡಿಕೊಟ್ಟು ಮಾದರಿಯಾಗಿದೆ.

ವಯನಾಡಿನ ಕುರಿಚ್ಯಾರ್‍ಮಲ ಎಂಬಲ್ಲಿನ ಮದ್ರಸಾದ ಮೇಲ್ಭಾಗದಲ್ಲಿ ಮಕ್ಕಳಿಗೆ ಶಾಲೆಯನ್ನು ತೆರೆಯಲಾದ ಕಾರಣ ಪುಟ್ಟ ಮಕ್ಕಳ ಶಿಕ್ಷಣ ಅಬಾಧಿತವಾಗಿ ಮುಂದುವರಿಯಲು ಅವಕಾಶವಾಗಿದೆ.

ಶಾಲೆಯ ಶಿಕ್ಷಣದಿಂದ ಮಕ್ಕಳು ವಂಚಿತಗೊಳ್ಳುತ್ತಿದ್ದಾರೆ. ಆದ್ದರಿಂದ ಶಾಲೆಗಾಗಿ ಸ್ಥಳವಕಾಶ ಮಾಡಿಕೊಡಬಹುದಾ ಎಂದು ಊರವರು ಮದ್ರಸಾ ಕಮಿಟಿಯನ್ನು ವಿನಂತಿಸಿ ಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಮೊಹಲ್ಲಾ ಸಮಿತಿ ಹತ್ತು ನಿಮಿಷದಲ್ಲಿ ಮದ್ರಸದ ಕಟ್ಟಡದ ಮೇಲ್ಭಾಗದಲ್ಲಿ ಶಾಲೆ ತೆರೆಯಲು ಅವಕಾಶ ಕಲ್ಪಿಸಿ ಕೊಟ್ಟಿತು ಎಂದು ತಿಳಿಸಿದರು.

ಹಳೆಯ ಸರಕಾರಿ ಶಾಲೆಯನ್ನು ಪೂರ್ವ ಸ್ಥಿತಿಗೆ ತರಬೇಕಾದರೆ ಅಲ್ಲಿ ತಿಂಗಳುಗಟ್ಟಲೆ ಪರಿಹಾರ ಕಾರ್ಯ ನಡೆಯುವ ಅಗತ್ಯವಿದೆ. ಆದ್ದರಿಂದ ಮಕ್ಕಳಿಗೆ ಬದಲಿ ವ್ಯವಸ್ಥೆ ಅನಿವಾರ್ಯವಾಗಿತ್ತು. ಆದ್ದರಿಂದ ಊರವರ ಮನವಿಗೆ ಮದ್ರಸಾ ಕಮಿಟಿ ತಕ್ಷಣ ಸ್ಪಂದಿಸಿದ್ದು ಎನ್‍ಜಿವೊಗಳು ಊರವರ ಜೊತೆ ಸೇರಿಕೊಂಡಿತು. ನಂತರ ಅತಿ ಶೀಘ್ರದಲ್ಲಿ ಶಾಲೆಗಾಗಿ ಸರ್ವ ವ್ಯವಸ್ಥೆಯು ಮದ್ರಸದ ಕಟ್ಟಡದಲ್ಲಿ ಸುಸೂತ್ರವಾಗಿ ನಡೆದಿದೆ. ಮಕ್ಕಳು ಹೊಸ ಶಾಲೆಯ ವಾತಾವರಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ

Leave a Reply