ಇಡೀ ವಿಶ್ವದಲ್ಲಿ ನೀರಿನ ಕೊರತೆ ಕಾಣುತ್ತಿದೆ. ಜನರು ನೀರಿಗಾಗಿ ಹಾಹಾಕಾರ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೀಗ ವಿಜ್ಞಾನಿಗಳು ನೀರಿನ ಬಗ್ಗೆ ಒಂದು ಶುಭ ಸುದ್ದಿ ನೀಡಿದ್ದಾರೆ. ಸಮುದ್ರದ ನೀರನ್ನು ಸಿಹಿ ನೀರಾಗಿ ಪರಿವರ್ತಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಸಮುದ್ರದ ನೀರನ್ನು ಸಿಹಿನೀರಾಗಿ ಪರಿವರ್ತಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದು, ಸಮುದ್ರದ ನೀರಿನಲ್ಲಿರುವ ಉಪ್ಪು ತೆಗೆದು ಹಾಕಿದರೆ ಆ ನೀರನ್ನು ನಾವು ಕುಡಿಯಲು ಮತ್ತು ನೀರಾವರಿಗಾಗಿ ಬಳಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಕುರಿತು ವಿಜ್ಞಾನಿಗಳ ತಂಡವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದೆ.

ಈ ಪ್ರಕ್ರಿಯೆಯನ್ನು ಉಷ್ಣಾಂಶದ ದ್ರಾವಕ ಬೇರ್ಪಡಿಸುವಿಕೆ ಎಂದು ಕರೆಯಲಾಗುತ್ತದೆ. ಇದು ಸಾಧಾರಣ ಸಮುದ್ರದ ಉಪ್ಪಿನ ಮಟ್ಟದ ಏಳು ಪಟ್ಟು ನೀರನ್ನು ಶುಚಿಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದರಿಂದ ನಮಗೆ ಹೆಚ್ಚಿನ ಮಟ್ಟದಲ್ಲಿ ನೀರು ಸಿಗುವುದು ಮಾತ್ರವಲ್ಲ, ನಮ್ಮ ನದಿಗಳು ಮತ್ತು ಅಂತರ್ಜಲ ಮಾಲಿನ್ಯವನ್ನು ತಡೆಯಬಹುದು ಎಂದು ಹೇಳಲಾಗಿದೆ.

ಈ ಪ್ರಕ್ರಿಯೆ ಬಹಳಷ್ಟು ಸಂಕೀರ್ಣವಾಗಿದ್ದು, ಉಪ್ಪು ಮತ್ತು ನೀರಿನ ಬೇರ್ಪಡಿಸುವಿಕೆಯನ್ನು ವಿಜ್ಞಾನಿಗಳು ವಿಡಿಯೋ ಮೂಲಕ ತೋರಿಸಿದ್ದಾರೆ. ನೀರಿನಲ್ಲಿನ ಉಪ್ಪಿನ 98.4% ನಷ್ಟು ಭಾಗ ಸಂಶೋಧಕರ ತಂಡವು ತೆಗೆದುಹಾಕಲು ಯಶಸ್ವಿಯಾಗಿದ್ದು, ಇದರಿಂದ ನೀರು ಇನ್ನಷ್ಟು ಸುಲಭವಾಗಿ ಅಗ್ಗವಾಗಿ ಸಿಗಲು ಸಾಧ್ಯವಾಗಬಹುದು ಎಂದಿದ್ದಾರೆ.

Leave a Reply