ಬೆಂಗಳೂರು: ದೇಶಾದ್ಯಂತ 2018ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು, ಇತರ ನಗರಗಳಲ್ಲಿ ಪೊಲೀಸರ ಸರ್ಪಗಾವಲಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ ಕೋರಲಾಗಿದೆ.

ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಸಂಭವಿಸಿದ್ದ ಸಾಮೂಹಿಕ ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಬೆಂಗಳೂರಿನ ಎಂಜಿ ರಸ್ತೆ, ಚರ್ಚ್’ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಅದಲ್ಲದೇ ಇನ್ನಿತರ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ನಿಂತಿದ್ದರು.

ನೂರಾರು ಸಿಸಿಟಿವಿಗಳು ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ಸಂಭ್ರಮಾಚರಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಹೊಯ್ಸಳ ಮತ್ತು ಪಿಂಕ್ ಹೊಯ್ಸಳ ವಾಹನಗಳು, ಚೀತಾ ವಾಹನಗಳು ಜನರ ರಕ್ಷಣೆಗೆ ಗಸ್ತು ತಿರುಗುತ್ತಿದ್ದು, ಪ್ರತೀ ಠಾಣೆಗೆ ಎರಡರಂತೆ ಒಟ್ಟು 320 ಚೀತಾ ಬೈಕ್ ಗಳು ಬೆಳಗಿನ ಜಾವದವರೆಗೂ ಗಸ್ತು ತಿರುಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Leave a Reply