ಸಿಡ್ನಿ : ವಿಶ್ವದ ಶ್ರೇಷ್ಠ ಹಿರಿಯ ಟೆನಿಸ್ ತಾರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮಾಡಿಸಲು ಟಾಪ್ ಲೆಸ್ ಆಗುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾತ್ರವಲ್ಲ ಸ್ತನ ಕ್ಯಾನ್ಸರ್ ಜಾಗೃತಿ ಬಗ್ಗೆ ಒಂದು ಹಾಡನ್ನೂ ಹಾಡಿ ಅದನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಮತ್ತು ನಿಯಮಿತವಾಗಿ ಅದನ್ನು ಸ್ವಯಂ ಪರೀಕ್ಷಿಸುತ್ತಿರಬೇಕು ಎಂದು ಸೆರೆನಾ ಸಂದೇಶ ಸಾರಿದ್ದಾರೆ.

ಸೆರೆನಾರವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಕೇವಲ ಹತ್ತು ಗಂಟೆಯ ಅವಧಿಯಲ್ಲಿ ವಿಡಿಯೋ ೧.೩. ಮಿಲಿಯನ್ ಅಭಿಮಾನಿಗಳು ವೀಕ್ಷಿಸಿದ್ದಾರೆ.

ಒಂದಿಲ್ಲೊಂದು ಕಾರ್ಯದ ಮೂಲಕ ಸೆರೆನಾ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಯು ಎಸ್ ಓಪನ್ ಫೈನಲ್ ಪಂದ್ಯದಲ್ಲಿ ಸೋತಾಗ ರೆಫ್ರಿ ವಿರುದ್ಧ ಹರಿಯಯ್ದಿದ್ದರು.

Leave a Reply