ಹುಡುಗಿಯ ಸುಮಧುರ ಧ್ವನಿ ಕೇಳಲಿಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದೆ, ಆದರೆ ಅದು ಹುಡುಗನಾಗಿದ್ದ ಎಂದು ಶಾಹಿದ್ ಅಫ್ರಿದಿ ಗತಕಾಲದ ನೆನಪನ್ನು ಬಿಚ್ಚಿಟ್ಟಿದ್ದಾರೆ.
ಮದುವೆಗೆ ಮುಂಚೆ ಅಫ್ರಿದಿ ಒಬ್ಬ ‘ಹುಡುಗಿ’ಯೊಂದಿಗೆ ಮಾತನಾಡುತ್ತಿದ್ದರು. ಅಫ್ರಿದಿಯ ಪ್ರಕಾರ ಆ ಸಮಯದಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು ತುಂಬಾ ದುಬಾರಿಯಾಗಿತ್ತು.ಅದರೂ ಅವಳ ಸುಮಧುರ ಧ್ವನಿ ಕೇಳಲಿಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಅಫ್ರಿದಿ ಹೇಳಿದರು, “ನಾವು ಭೇಟಿಯಾಗಲು ನಿರ್ಧರಿಸಿದೆವು…ಕರೆಗಂಟೆ ಬಾರಿಸಿತು ಹಾಗೂ ಎದುರಿಗೆ ಒಬ್ಬ ಹುಡುಗ ಗುಲಾಬಿ ಹಿಡಿದು ನಿಂತಿದ್ದ. ಇತ್ತೀಚೆಗೆ ಬಿಡುಗಡೆಗೊಂಡಿರುವ ಅಫ್ರಿದಿ ಆತ್ಮಚರಿತ್ರೆ ‘ಗೇಮ್ ಚೇಂಜರ್’ನಲ್ಲಿ ಈ ವಿಚಾರವನ್ನು ಅಫ್ರಿದಿ ಬರೆದುಕೊಂಡಿದ್ದಾರೆ.
