ತಸ್ನಿಮ್ ಜರಾ ವಿವಾಹ ವಿಶೇಷವಾಗಿದೆ. ಮದುವೆಯ ಸ್ವಾಗತಕ್ಕೆ ತೆರಳಿದಾಗ ಯಾವುದೇ ಮೇಕ್ಅಪ್ ಮಾಡಿರಲಿಲ್ಲ ಮತ್ತು ಆಭರಣವನ್ನು ಧರಿಸಲಿಲ್ಲ ಹಾಗೂ ತನ್ನ ಅಜ್ಜಿಯ ಹತ್ತಿ ಸೀರೆ ಧರಿಸಿದ್ದರು.

ಬಾಂಗ್ಲಾದೇಶದ ಆರೋಗ್ಯ ಸಂರಕ್ಷಣಾ ನಿಧಿಯ ವೇದಿಕೆಯಾದ ಅರೋಗೋದ ಅಧ್ಯಕ್ಷರಾಗಿರುವ ಜಾರ, ಈ ನಿರ್ಧಾರ ತೆಗೆದುಕೊಂಡಾಗ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ವಧುವಿನಂತೆ ವಸ್ತ್ರ ಧರಿಸದಿದ್ದರೆ ಆಕೆಯ ಜೊತೆ ಫೋಟೋ ತೆಗೆಯುವುದಿಲ್ಲ ಎಂದು
ಕೆಲವು ಕುಟುಂಬದ ಸದಸ್ಯರು ಹೇಳಿದರು. ಆದರೆ ಜಾರಾ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದರು.
ಸಾಂಪ್ರದಾಯಿಕವಾಗಿ ವಧು ಇಂತಿಂತಹ ವಸ್ತ್ರ ಧರಿಸುವ ಒತ್ತಡಕ್ಕೆ ಜಾರಾ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ. ಸಿದ್ಧಾಂತವು ಕಾರ್ಯರೂಪಕ್ಕೆ ಬಂದರೆ ಮಾತ್ರ ಕ್ರಾಂತಿಯುಂಟಾಗುತ್ತದೆ ಎಂಬುದಕ್ಕೆ ತಸ್ನಿಮ್ ಜಾರಾ ಒಂದು ಜೀವಂತ ಉದಾಹರಣೆ.

Leave a Reply