ಹೊಸದಿಲ್ಲಿ, ಜ.3: ನಿಕಟ ಬಂಧು ಪುರುಷನ ಆಧಾರವಿಲ್ಲದೆ ಹಜ್‍ಗೆ ಹೋಗಲು ಮಹಿಳೆಗೆ ಅನುಮತಿ ಸಿಕ್ಕಿದ್ದು ಸೌದಿ ಅರೇಬಿಯದ ಒಂದು ವಿನಾಯಿತಿಯಿಂದಾಗಿದೆ. ಇದರ ಶ್ರೇಯಸ್ಸನ್ನೆತ್ತಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪರಿಶ್ರಮ ಪಡುತ್ತಿರುವುದನ್ನು ವ್ಯಂಗವಾಗಿ ಬೆಟ್ಟು ಮಾಡಲಾಗುತ್ತಿದೆ.

ಹಜ್‍ಗೆ ಬರುವ ಮಹಿಳೆಗೆ ನಿಕಟ ಸಂಬಂಧಿಕ ಪುರುಷ (ಮೆಹ್ರಂ) ಆಧಾರ ಇರಬೇಕೆಂದು ಸೌದಿ ಅರೇಬಿಯದಲ್ಲಿ ಮೊದಲು ನಿಯಮವಿತ್ತು. 2012ರಲ್ಲಿ ಈ ವ್ಯವಸ್ಥೆ ವಿವಾದಕ್ಕೆ ಕಾರಣವಾಗಿತ್ತು. ಮೆಹ್ರಂ ಇಲ್ದೆ ಹಜ್ ಕರ್ಮಕ್ಕೆ ಬಂದ 1,000 ನೈಜೀರಿಯನ್ ಮಹಿಳೆಯರನ್ನು ಜಿದ್ದಾದಿಂದ ವಾಪಸು ಕಳುಹಿಸಿದ್ದೇ ವಿವಾದಕ್ಕೆ ಕಾರಣವಾಗಿತ್ತು.

ಈ ಮಧ್ಯೆ ಸೌದಿ ವಿನಾಯಿತಿ ನೀಡಿದೆ. 4 ವರ್ಷ ಕಳೆದ ಮಹಿಳೆಯರಿಗೆ ಮೆಹ್ರಮ್ ಇಲ್ಲದೆ ಗುಂಪಾಗಿ ಹಜ್‍ಗೆ ಬರಬಹುದು. ಈ ವಿಶೇಷ ಗುಂಪಿನೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಯಿತು. ತಂದೆ/ ಸಹೋದರ/ಪುತ್ರನ ಸಾಕ್ಷ್ಯ ಪತ್ರ ನೀಡಬೇಕಾಗಿದೆ. ಸೌದಿ ಅರೇಬಿಯದ ಉಭಯ ಕಕ್ಷಿ ಒಪ್ಪಂದದಲ್ಲಿ ಎಲ್ಲ ದೇಶಗಳಿಂದ ಹಜ್ ಯಾತ್ರೆಗೆ ಬರುವವರಿಗೆ ಈ ವಿನಾಯಿತಿ ಪಡೆಯುವ ಅರ್ಹತೆ ಇದೆ. ಈ ವರ್ಷದಲ್ಲಿ ಹಜ್‍ಗೆ ಈ ವಿನಾಯಿತಿಯಡಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಕ್ರಮ ಕೈಗೊಂಡಿದೆ.

ಪ್ರತಿ ತಿಂಗಳ ರೇಡಿಯೊ ಕಾರ್ಯಕ್ರಮ ಮನ್‍ಕಿ ಬಾತ್‍ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ, ಒಬ್ಬರೇ ಹಜ್ಗೆ ಹೋಗಲು ಅರ್ಜಿ ಸಲ್ಲಿಸುವ ನೂರಾರು ಮಹಿಳೆಯರನ್ನು ಸೋಡ್ತಿ ಪ್ರಕ್ರಿಯೆಗೆ ಪರಿಗಣಿಸದೆ ವಿಶೇಷ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು. ಮಹಿಳೆ, ಪುರುಷ ಸಮಾನವಕಾಶ ನೀಡಲಾಗುವುದು ಎಂದು ಹೇಳಿದರು.

ಮುಸ್ಲಿಂ ಮಹಿಳೆಯರಿಗೆ ಸಮಾನವಕಾಶ ಕೊಡಿಸುವ ಸರಕಾರದ ಪ್ರಯತ್ನದ ಭಾಗವಿದೆಂದು ಬಿಂಬಿಸಲು ಮೋದಿ ಇದನ್ನು ಮನ್‍ಕಿ ಬಾತ್‍ನಲ್ಲಿ ವಿವರಿಸಿದ್ದಾರೆ. ಮುತ್ತಲಾಕ್ ಕ್ರಿಮಿನಲ್ ಅಪರಾಧ ಎಂದು ಕಾನೂನು ಕ್ರಮಗಳ ಮೂಲಕ ಪ್ರಧಾನಿ ಮಹಿಳಾ ಸಮಾನತೆಯ ಮಾತನ್ನು ಆಡುತ್ತಿದ್ದಾರೆ. ಮೆಹ್ರಂ ರಿಯಾಯಿತಿ ಭಾರತ ನೀಡಿಲ್ಲ. ಆದರೆ ಆ ರೀತಿ ಇಲ್ಲಿ ಪ್ರಚಾರ ಆಗುತ್ತಿದೆಯಷ್ಟೇ.
ಮೆಹ್ರಂ ಕುರಿತು ಮೊದಲು ಕೇಳಿದಾಗ ತಾನು ಅಚ್ಚರಿಬಿದ್ದೆ. ಹೇಗೆ ಇದು ಸಾಧ್ಯ. ಇಂತಹ ನಿಯಮಗಳನ್ನು ಸರಕಾರಕ್ಕೆ ರೂಪಿಸಲು ಹೇಗೆ ಸಾಧ್ಯ. ಯಾಕೆ ಈ ತಾರತಮ್ಯ? ಸ್ವಾತಂತ್ರ್ಯ ಲಭಿಸಿ 70 ವರ್ಷಗಳ ಬಳಿಕ ಇದು ಮುಂದುವರಿಯುತ್ತಿದೆ. ಆದರೆ ಇದನ್ನು ಯಾರು ಪ್ರಶ್ನಿಸುವುದಿಲ್ಲ ಎಂದು ಮೋದಿ ಹೇಳಿದರು.
ಮೋದಿಯವರ ನಿರ್ದೇಶ ಪರಿಗಣಿಸಿ 1,300 ಮಹಿಳೆಯರಿಗೆ ಈ ಬಾರಿ ಪುರುಷ ಆಧಾರವಿಲ್ಲದೆ ಹಜ್ ಯಾತ್ರೆ ಸೌಕರ್ಯ ಖಚಿತ ಪಡಿಸಲಾಗುವುದು ಎಂದು ಭಾಷಣದಲ್ಲಿ ಹೊರಬಂದೊಡನೆ ಅಲ್ಪಸಂಖ್ಯಾತ ಸಚಿವ ಇವರನ್ನು ಸೋಡ್ತಿ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದರು. ಸೌದಿ ಅರೇಬಿಯದ ವಿನಾಯಿತಿಯ ಕ್ರೆಡಿಟನ್ನು ಕೇಂದ್ರ ಸರಕಾರ ತನ್ನದೆಂದು ಹೇಳಲು ಪ್ರಯತ್ನಿಸುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Leave a Reply