ತುತ್ತುಕುಡಿ: ತೂತ್ತುಕುಡಿಯ ನ್ಯಾಯಾಲಯವೊಂದು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಬಂಧಿಸಲಾಗಿದ್ದ ಸಂಶೋಧನಾ ವಿದ್ಯಾರ್ಥಿನಿ ಲೂಯಿಸ್ ಸೋಫಿಯಾಗೆ ಜಾಮೀನು ನೀಡಿದೆ. ಇದೇ ವೇಳೆ ಸೋಫಿಯಾರ ತಂದೆ ತನ್ನ ಪುತ್ರಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ದೂರಿದರು.

ತಮಿಳ್ನಾಡು ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರ್‍ರಾಜ ವಿರುದ್ಧ ಸೋಫಿಯಾ ಏನೂ ಹೇಳಿಲ್ಲ ಎಂದು ಸೋಫಿಯ ತಂದೆ ಹೇಳಿದರು. ಸೋಫಿಯಾ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಸೋಪಿಯ ತಂದೆ ಎಂದು ತೂತ್ತುಕುಡಿಯಲ್ಲಿ ವೈದ್ಯರಾಗಿದ್ದಾರೆ.

ಸೋಫಿಯಾರನ್ನು ನಿನ್ನೆ ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ವಿಮಾನದಲ್ಲಿ ಘೋಷಣೆ ಕೂಗಿದ್ದಕ್ಕಾಗಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಕೆನಡದ ಮಾಂಟ್ರಿಯಲ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಫ್ಯಾಶಿಸಂ ನಾಶವಾಗಲಿ ಎಂದು ಘೋಷಣೆ ಕೂಗಿದ್ದಕ್ಕಾಗಿ ಸೋಫಿಯಾರನ್ನು ಬಂಧಿಸಲಾಗಿತ್ತು.

ಚೆನ್ನೈಯಿಂದ ತೂತ್ತುಕುಡಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ವಿಮಾನದೊಳಗೆ ಬಿಜೆಪಿ ರಾಜ್ಯಧ್ಯಕ್ಷ ತಮಿಳಿಸೈ ಸಂದರ್‍ರಾಜ ಇದ್ದರು. ಅವರ ವಿರುದ್ಧ ಫ್ಯಾಶಿಸಂ ನಾಶವಾಗಲಿ ಎಂದು ಸೋಫಿಯಾ ಘೋಷಣೆ ಕೂಗಿದ್ದರು. ನಂತರ ಮಾತಿನ ಚಕಮಕಿಗೆ ಕಾರಣವಾಗಿದ್ದು, ಪೊಲೀಸರು ಸೋಫಿಯಾರನ್ನು ಬಂಧಿಸಿದ್ದರು.

Leave a Reply