ಲಕ್ನೋ: ಉತ್ತರ ಪ್ರದೇಶ ಗ್ರಾಮದಲ್ಲಿ ಬಡ ಮಹಿಳೆಯೊಬ್ಬಳು 15 ದಿನದ ಪುಟ್ಟ ಮಗುವನ್ನು ಅಪರಿಚಿತ ವ್ಯಕ್ತಿಗೆ 42,000 ರೂಪಾಯಿಗಳ ಮಾರಾಟ ಮಾಡಿದ ದಾರುಣ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು, ಬೆನ್ನುಮೂಳೆಯ ಮುರಿತಕ್ಕೊಳಗಾಗಿ ಮೂರು ತಿಂಗಳಿಂದ ಮನೆಯಲ್ಲಿ ಹಾಸಿಗೆ ಹಿಡಿದಿರುವ ಪತಿಯ ಚಿಕಿತ್ಸೆಗಾಗಿ ಅವರಿಗೆ ಹಣವನ್ನು ಬೇಕಾಗಿತ್ತು ಎಂದು ಸಂಜು ಮೌರ್ಯ(30) ಹೇಳಿದ್ದಾರೆ.

ಯಾವುದೇ ಪ್ರಕರಣ ಇನ್ನೂ ದಾಖಲಿಸಲಾಗಿಲ್ಲ. ಆದರೆ ಬರೇಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಮ್ ಸಿಂಗ್ ಅವರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ವೃತ್ತ ಅಧಿಕಾರಿಯವರಿಗೆ ಮಗು ಮಾರಾಟದ ತನಿಖೆ ನಡೆಸುವಂತೆ ಹೇಳಿದ್ದಾರೆ

ಅಧಿಕಾರಿಗಳಿಂದ ವರದಿ ಪಡೆದ ನಂತರ ನಾವು ಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದು ಸಿಂಗ್ ಹೇಳಿದರು.

Leave a Reply