ಶ್ರೀನಗರ : ರಸ್ತೆ ಅಪಘಾತದಲ್ಲಿ ಮಡಿದ ಮಗನ ಅಂತ್ಯ ಸಂಸ್ಕಾರ ನಡೆಸಲು ಬಂದಿದ್ದ ಯೋಧ ಲ್ಯಾನ್ಸ್ ನಾಯಕ್ ಮುಖ್ತರ್ ಅಹ್ಮದ್ ಮಲಿಕ್ (43)ರನ್ನು ಉಗ್ರರು ಅಪಹರಿಸಿ ಹತ್ಯೆಗೈದ ಹೃದಯವಿದ್ರಾವಕ ಘಟನೆ ಕುಲ್ ಗಾಂವ್ ನಲ್ಲಿ ನಡೆದಿದೆ. ಅಪಹರಿಸಿದ ವೇಳೆ ಸೇನಾ ನಿಯೋಜನೆಯ ಮಾಹಿತಿಯ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿ ಯೋಧ ಮಲಿಕ್ ರಿಗೆ ಹಿಂಸೆ ನೀಡಲಾಗಿತ್ತು.

ಆದರೆ ಮಗನ ಅಂತ್ಯ ಸಂಸ್ಕಾರದ ದುಃಖದ ನಡುವೆಯೂ ಉಗ್ರರಿಗೆ ಸೇನಾ ಮಾಹಿತಿಯನ್ನು ನೀಡದೆ ಇದ್ದಾಗ ಮಲಿಕ್ ರನ್ನು ಉಗ್ರರು ಹತ್ಯೆಗೈದಿದ್ದಾರೆ. ಮಗನ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನಡೆಸುತ್ತಿದ್ದ ವೇಳೆ ಪತ್ರಕರ್ತರ ವೇಷದಲ್ಲಿ ಬಂದು ಉಗ್ರರು ಅವರನ್ನು ಅಪಹರಿಸಿದ್ದರು. ನನ್ನನ್ನು ಕೊಂದರೂ ನಾನು ಸೇನೆಯ ಮಾಹಿತಿ ಹೇಳಲಾರೆ ಎಂಬುದು ಮಲಿಕ್ ರವರ ಕೊನೆಯ ಮಾತಾಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ.

ಅದೇ ರೀತಿ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ನರೇದ್ರ ಕುಮಾರ್ ಅವರನ್ನು ಶಸ್ತ್ರ ಸಹಿತ ಉಗ್ರರು ಅಪಹರಿಸಿ ಸೇನಾ ಮಾಹಿತಿ ನೀಡದಿದ್ದಾಗ ಹಿಂಸಿಸಿ ಗಂಟಲು ಸೀಳಿ ಹತ್ಯೆಗೈದಿದ್ದಾರೆ.ಈ ಎರಡೂ ಘಟನೆಯಲ್ಲಿ ಇಬ್ಬರು ಯೋಧರು ತಮ್ಮ ಮಾತೃಭೂಮಿ ರಕ್ಷಣೆಗಾಗಿ ದೇಶ ಪ್ರೇಮ ಮೆರೆದು ಹುತಾತ್ಮರಾಗಿದ್ದಾರೆ.

Leave a Reply