ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ಅಕ್ಕಿ- 2 ಕಪ್, ಚಿಕನ್- 1 ಕಿಲೋ (ಚರ್ಮ ದೊಂದಿಗೆ ಸೇರಿಸಿ ನಾಲ್ಕೈದು ತುಂಡು ಮಾಡಿದ್ದು), ನೀರುಳ್ಳಿ- 1
ದೊಡ್ಡದು, ಶುಂಠಿ ಪೇಸ್ಟ್- 1/2 ಸ್ಪೂ., ಬೆಳ್ಳುಳ್ಳಿ ಪೇಸ್ಟ್- 1/2 ಸ್ಪೂ.,ಟೊಮೆಟೊ- 2, ಹಸಿಮೆಣಸಿನ ಕಾಯಿ- 5, ಬೆಣ್ಣೆ- 1 ಸ್ಪೂ.,
ಮಂದಿ ಸ್ಪೈಸ್ ಪೌಡರ್- 1/2 ಸ್ಪೂ. ಅಥವಾ ಅರೇಬಿಯನ್ ಸ್ಪೈಸ್ ಪೌಡರ್, ಏಲಕ್ಕಿ- 5, ಲವಂಗ- 5, ಕರಿಮೆಣಸು- 1 ಸ್ಪೂ., ಕೆತ್ತೆ- ಒಂದು ತುಂಡು, ಆಲಿವ್ ಎಣ್ಣೆ- 3 ಸ್ಪೂ, ನೀರು3 ಕಪ್, ಉಪ್ಪು- ಬೇಕಾದಷ್ಟು.

ಮಾಡುವ ವಿಧಾನ:

ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಯಲು ಬಿಡಿ. ಟೊಮೆಟೊ ಪೇಸ್ಟ್ ಮಾಡಿಡಿ. ಒಂದು ದೊಡ್ಡ ಪಾತ್ರೆಯಲ್ಲಿ ಆಲಿವ್ ಎಣ್ಣೆ ಹಾಕಿ ನೀರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಬಾಡಿಸಿ ತೆಗೆಯಿರಿ. ಬಳಿಕ ಟೊಮೆಟೊ ಪೇಸ್ಟ್, ಏಲಕ್ಕಿ, ಲವಂಗ, ಕರಿಮೆಣಸು, ದಾಲ್ಚಿನಿ ಸೇರಿಸಿ.ಅದಕ್ಕೆ ಚಿಕನ್, ಕುದಿಸಿದ 3 ಕಪ್ ನೀರು, ಅಗತ್ಯಕ್ಕೆ ಉಪ್ಪು, ಮಂದಿ ಸ್ಪೈಸ್ ಪೌಡರ್ ಹಾಕಿ ಮುಚ್ಚಿ 15 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 15 ನಿಮಿಷದ ಬಳಿಕ ಚಿಕನ್ ತೆಗೆದು ಅಕ್ಕಿಯನ್ನು ಅದಕ್ಕೆ ಸೇರಿಸಿ ಬೇಯಿಸಿ.

ಬೆಣ್ಣೆ ಅರ್ಧ ಚಮಚ, ಮಂದಿ ಸ್ಪೈಸ್2 ಚಿಟಕಿ, ಕೆಂಪು ಕಲರ್ ಕಲಸಿ ಅದನ್ನು ಚಿಕನ್‍ಗೆ ಚೆನ್ನಾಗಿ ಸವರಿ. ಓವನ್‍ನಲ್ಲಿ 350 ಡಿಗ್ರಿ ಫ್ಯಾರನ್ ಹೀಟ್ ಗ್ರಿಲ್ ಮಾಡಿ.ಅಕ್ಕಿ ಬೇಯುತ್ತಾ ಬರುವಾಗ, ಒಂದು ಸಣ್ಣ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದಕ್ಕೆ ಉರಿಸಿದ ಚಾರ್‍ಕೋಲ್ (ಕೆಂಡ) ಇಟ್ಟು ತಟ್ಟನೆ ಪಾತ್ರೆಯನ್ನು ಮುಚ್ಚಿ 10 ನಿಮಿಷ ಹಾಗೆ ಬಿಡಿ.ಮಂದಿ ರೈಸ್‍ಗೆ ಸ್ಮೋಕ್‍ನ ಪರಿಮಳ ಬರಲು ಹೀಗೆ ಮಾಡಬೇಕು. ಒಂದು ದೊಡ್ಡ ಪಾತ್ರೆಯಲ್ಲಿ ಅನ್ನ ಹಾಕಿ, ಗ್ರಿಲ್ ಮಾಡಿದಚಿಕನ್ ಪೀಸ್, ಕತ್ತರಿಸಿದ ಕ್ಯಾರೆಟ್, ಮುಳ್ಳು ಸೌತೆಯನ್ನು ಹಾಕಿಅಲಂಕರಿಸಿ. ಘಮ ಘಮಿಸುವ ಮಂದಿ ಚಿಕನ್ ಸಿದ್ಧ.

Leave a Reply