Image courtesy: Daijiworld

ಮಂಗಳೂರು: ಭಯೋತ್ಪಾದಕರನ್ನು ಶ್ರೀಲಂಕಾ ಮುಸ್ಲಿಮರೇ ವಿರೋಧಿಸುತ್ತಾರೆ ಎಂದು ಇತ್ತೀಚಿಗೆ ಶ್ರೀಲಂಕಾ ಪ್ರಧಾನಿ ಹೇಳಿಕೆ ನೀಡಿದ್ದರು. ಮಂಗಳೂರು ನಗರದ ಮುಸ್ಲಿಂ ಸಮುದಾಯದ ಸದಸ್ಯರು ಇಲ್ಲಿನ ಕ್ರೈಸ್ತ ಸಮುದಾಯದೊಂದಿಗೆ ಐಕ್ಯ ಪ್ರದರ್ಶಿಸಿ ಸೌಹಾರ್ದ ಮೆರೆದಿದೆ.

ಮೇ 5 ರಂದು ಭಾನುವಾರದಂದು ಮಿಲಾಗ್ರೆಸ್ ಚರ್ಚ್ ಆವರಣದಲ್ಲಿ ಒಟ್ಟು ಸೇರಿದ ಮುಸ್ಲಿಂ ಸಹೋದರರು ಕ್ರಿಶ್ಚಿಯನ್ನರೊಂದಿಗೆ ಐಕಮತ್ಯ ಪ್ರದರ್ಶಿಸಿ, ಶ್ರೀಲಂಕಾ ಸ್ಪೋಟದಲ್ಲಿ ಮಡಿದ ಅಮಾಯಕರಿಗಾಗಿ ಸಾಂತ್ವನ ಹೇಳುತ್ತಾ, ನಾವೆಲ್ಲಾ ಒಂದು ಮತ್ತು ಭಯೋತ್ಪಾದಕರು ಮಾನವೀಯತೆಯ ಶತ್ರುಗಳು ಎಂಬ ಸಂದೇಶವನ್ನು ಸಾರಿದರು.

Image: Daijiworld

ಈ ಸಂದರ್ಭದಲ್ಲಿ ಮಾತನಾಡಿದಮಿಲಾಗ್ರಿಸ್ ಚರ್ಚ್ನ ಪ್ಯಾರಿಷ್ ಪಾದ್ರಿ ಫಾ. ವ್ಯಾಲೇರಿಯನ್ ಡಿ’ಸೋಜಾ ಅವರು, “ಶ್ರೀಲಂಕಾದಲ್ಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಶಾಂತಿ ಮತ್ತು ಕ್ರಿಶ್ಚಿಯನ್ ರೊಂದಿಗೆ ಮುಸ್ಲಿಂ ಸಹೋದರರು ಒಗ್ಗಟ್ಟಿನ ಸಂದೇಶ ಸಾರಿದ್ದು ನಿಜಕ್ಕೂ ಒಂದು ಅದ್ಭುತ ಕ್ಷಣ. ನಿಜವಾಗಿ ಎಲ್ಲರಿಗೂ ಶಾಂತಿ ಬೇಕು ಮತ್ತು ನಾವೆಲ್ಲರೂ ಒಂದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ಸಂಘಟನೆಯ ನಾಯಕರುಗಳು ಭಾಗವಹಿಸಿದ್ದರು.

Leave a Reply