ಬೇಕಾಗುವ ಸಾಮಗ್ರಿಗಳು:

ದೊಡ್ಡ ಬಂಡಾಸ್- 300 ಗ್ರಾಂ, ಸಣ್ಣ ಸಿಗಡಿ- 100 ಗ್ರಾಂ, ಮುಳ್ಳಿಲ್ಲದ ಮೀನು- 100 ಗ್ರಾಂ, ಸಾಧಾರಣ ಗಾತ್ರದ ಬಂಡಾಸ್- 100 ಗ್ರಾಂ.

ಮಸಾಲ ತಯಾರಿಸಲು:
ಈರುಳ್ಳಿ- 100 ಗ್ರಾಂ, ಕೆಂಪು ಮೆಣಸು- 10 ಗ್ರಾಂ, ಬೆಳ್ಳುಳ್ಳಿ- 15 ಗ್ರಾಂ, ಶುಂಠಿ- 15 ಗ್ರಾಂ, ಟೊಮೆಟೊ- 1, ಮೆಣಸಿನ ಹುಡಿ- 50 ಗ್ರಾಂ, ಹಳದಿ ಹುಡಿ- 10 ಗ್ರಾಂ, ಕೊತ್ತಂಬರಿ ಹುಡಿ- 15 ಗ್ರಾಂ, ಲಿಂಬೆಹಣ್ಣು- 2, ತೆಂಗಿನ ಹಾಲು- 60 ಮಿಲಿ ಲೀಟರ್, ತೆಂಗಿನ ಎಣ್ಣೆ- 100 ಎಂ.ಎಲ್., ಉಪ್ಪು ರುಚಿಗೆ.

ತಯಾರಿಸುವ ವಿಧಾನ:
ದೊಡ್ಡ ಬಂಡಾಸ್ ಮೀನನ್ನು ಒಳಭಾಗವನ್ನು ತೆಗೆದು ಹಾಕಿ ತೊಳೆದು ಶುಚಿ ಮಾಡಿ. ಕುದಿಯುವ ನೀರಿನಲ್ಲಿ ಒಂದು ನಿಮಿಷ ಬೇಯಿಸಿ. ಸಣ್ಣ ಸಿಗಡಿ, ಮೀನಿನ ತುಂಡುಗಳು, ಸಣ್ಣ ಬಂಡಾಸ್ ಇತ್ಯಾದಿಗಳನ್ನು ತೊಳೆದು ಶುಚಿಮಾಡಿ. ಹಳದಿ ಹುಡಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಲಿಂಬೆ ನೀರು, ಉಪ್ಪು ಇತ್ಯಾದಿಗಳನ್ನು ಸೇರಿಸಿ ಮಿಕ್ಸ್ ಮಾಡಿ ಇಡಿ.
ಒಂದು ಪ್ಯಾನಿನಲ್ಲಿ ತೆಂಗಿನ ಎಣ್ಣೆಯನ್ನು ಬಿಸಿಮಾಡಿ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವಿನ ಎಲೆ, ಮೆಣಸಿನ ಹುಡಿ ಹಾಕಿ ಬಾಡಿಸಿ. ಮಸಾಲೆ ಸವರಿಟ್ಟ ಮೀನುಗಳ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ಕೊನೆಯಲ್ಲಿ ತೆಂಗಿನ ಹಾಲು ಸೇರಿಸಿ ಕುದಿಸಿ.
ಬೇಯಿಸಿಟ್ಟ ದೊಡ್ಡ ಬಂಡಾಸಿನೊಳಗೆ ಈ ಮೇಲಿನ ಮಸಾಲೆಯನ್ನು ಹಾಕಿ ತುಂಬಿಸಿ. ಅದರ ಮೇಲ್ಭಾಗದಲ್ಲಿ ಕೊತ್ತಂಬರಿ ಹುಡಿ, ಹಳದಿ ಹುಡಿ, ಮೆಣಸಿನ ಹುಡಿ, ಮಿಶ್ರಣ ಸವರಿ, ಪ್ಯಾನಿನಲ್ಲಿ ತೆಂಗಿನ ಎಣ್ಣೆ ಹಾಕಿ ಇದನ್ನು ಚೆನ್ನಾಗಿ ಗ್ರಿಲ್ ಮಾಡಿ ತೆಗೆಯಿರಿ. ತುಂಡುಗಳನ್ನಾಗಿ ಮಾಡಿ ಬಡಿಸಬಹುದು.

ವಿವಿಧ ಬಂಡಾಸ್ ಪದಾರ್ಥಗಳು:

Leave a Reply