ಮುಂಬೈ: ಟಿವಿ ರಿಯಾಲಿಟಿ ಶೋ ಬಿಗ್‍ಬಾಸ್ 12 ಬೇಗನೆ ಆರಂಭವಾಗಲಿದೆ.ಈ ಸಲ ಶ್ರೀಶಾಂತ್ ಇದರಲ್ಲಿ ಭಾಗವಹಿಸಲಿದ್ದಾರಂತೆ. ಇದೇ ವೇಳೇ ಬಿಗ್‍ಬಾಸ್‍ನಲ್ಲಿ ಭಾಗವಹಿಸುವ ಸೆಲಬ್ರಿಟಿಗಳ ಅಭಿಮಾನಿಗಳು ತಮ್ಮ ನೆಚ್ಚಿನತಾರೆಯರನ್ನು ಬಿಗ್‍ಬಸ್ ಮನೆಯಲ್ಲಿ ನೋಡಲು ಬಹಳ ಕಾತರಿಸುತ್ತಾರೆ. ವಿವಾದಿತ ಕ್ರಿಕೆಟ್ ಬೌಲರ್ ಎಸ್.ಶ್ರೀಶಾಂತ್ ಈ ಸಲ ಬಿಗ್ ಬಾಸ್ ಮನೆಗೆ ಹೋಗಲಿದ್ದು, ಅವರು ಹೇಗೆ ತನ್ನ ದೇಹವನ್ನು ಹುರಿಗೊಳಿಸಿದ್ದಾರೆ ಎನ್ನುವುದು ತುಂಬ ಲೇಟೆಸ್ಟ್ ವಿಚಾರ.

ಅವರು ತಮ್ಮ ಹುರಿಗೊಳಿಸಿದ ದೇಹದ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು ತೀವ್ರ ತೆರನಾಗಿ ವೈರಲ್ ಆಗಿದೆ.

ಇತ್ತೀಚೆಗಿನ ಅವರ ಫೋಟೊಗಳಲ್ಲಿ ಅವರ ಜಬರದಸ್ತ್ ಟ್ರಾನ್ಸ್‍ಫಾರ್ಮೇಶನ್ ಪ್ರಕಟವಾಗಿದೆ.ಜಿಮ್‍ನಲ್ಲಿಅವರು ಬೆವರು ಹರಿಸಿದ್ದು ಸಾರ್ಥಕವಾಯಿತು ಎಂದು ಅಭಿಮಾನಿಗಳು ಅಂದುಕೊಳ್ಳಬಹುದು. ಈ ಫೋಟೊಗಳನ್ನುನೋಡುವಾಗ ಶ್ರೀಶಾಂತ್ ಬಿಗ್ ಬಾಸ್‍ನಲ್ಲಿ ಎಂಟ್ರಿಪಡೆಯುವುದಕ್ಕೆ ಪೂರ್ಣ ತಯಾರಿ ನಡೆಸುತ್ತಿದ್ದಾರೆನ್ನುವುದು ಸ್ಪಷ್ಟವಾಗುತ್ತಿದೆ.

Leave a Reply