ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋಟಿಗಟ್ಟಲೆ ಹಣ ಗಳಿಸಿದೆ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲವಾದ ಗ್ರಾಹಕರಿಂದ 2017 ಏಪ್ರಿಲ್- ನವೆಂಬರ್ ತಿಂಗಳ ಅವಧಿಯಲ್ಲಿ ಬ್ಯಾಂಕ್ ವಿಧಿಸಿದ ದಂಡದಿಂದ ಗಳಿಸಿದ ಮೊತ್ತ 2320 ಕೋಟಿ. ಏಪ್ರಿಲ್ – ಸಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್‍ನ ಲಾಭದ ಮೊತ್ತವಾದ 3,586 ಕೋಟಿಯ ಅರ್ಧದಷ್ಟು ಮೊತ್ತ ದಂಡ ವಸೂಲಿಯಿಂದಲೇ ಸಿಕ್ಕಿದೆ.

ಎಸ್‍ಬಿಐಯಲ್ಲಿರುವ ಖಾತೆದಾರರ ಸಂಖ್ಯೆ 42 ಕೋಟಿ. ಇದರಲ್ಲಿ 13 ಕೋಟಿ ಬೇಸಿಕ್ ಸೇವಿಂಗ್ ಬ್ಯಾಂಕ್ ಖಾತೆ ಮತ್ತು ಜನ್‍ಧನ್ ಖಾತೆ ಹೊಂದಿದವರಾಗಿದ್ದಾರೆ. ಈ ಎರಡು ಖಾತೆಗಳ ಗ್ರಾಹಕರು ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕಾಗಿಲ್ಲ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ದಂಡ ವಸೂಲಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Leave a Reply