ಒಂದು ಕಾಲದಲ್ಲಿ ಚೆನ್ನಾಗಿಯೇ ಬದುಕಿ ಬಾಳಿದ್ದ ಒಬ್ಬರು ಈಗ ತಮ್ಮವರೆಲ್ಲರನ್ನು ಕಳೆದುಕೊಂಡು ಬೀದಿಯಲ್ಲಿ ಬಿಕ್ಷೆ ಬೇಡುತ್ತಾ ಇರುವುದನ್ನು ಕಂಡು ನಾಲ್ಕು ಜನ ಸ್ನೇಹತರು ಆ ವ್ಯಕ್ತಿಯ ಮುಖದಲ್ಲಿ ಸಂತೋಷವನ್ನು ಅರಳಿಸಿದ್ದಾರೆ.ನಾಲ್ಕು ಮಂದಿ ಜನ ಸ್ನೇಹಿತರು ಸೇರಿ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಕೂದಲು ಕಟ್ಟಿಂಗ್ ಮತ್ತು ಶೇವಿಂಗ್ ಮಾಡಿಸಿ ಹೊಸ ಬಟ್ಟೆ ನೀಡಿದ್ದಾರೆ. ಮಾತ್ರವಲ್ಲ ಭಿಕ್ಷುಕನಂತೆ ಕಾಣುತ್ತಿರುವ ಆ ವ್ಯಕ್ತಿಗೆ ಹೊಸ ರೂಪ ಅಂದರೆ ಆ ವ್ಯಕ್ತಿಯ ನೈಜ ರೂಪ ಮರಳಿಸಿದ್ದಾರೆ. ಇಂತಹ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಯುವಕರು ನಿಜಕ್ಕೂ ಸಮಾಜಕ್ಕೆ ಮಾದರಿ ಆಗಿದ್ದಾರೆ.ನಮ್ಮ ಸುತ್ತ ಮುತ್ತ ಕಣ್ಣೋಡಿಸಿದಾಗ ಇಂತಹ ಹಲವಾರು ವ್ಯಕ್ತಿ ಗಳನ್ನೂ ಕಾಣಬಹುದು. ಒಂದು ಕಾಲದಲ್ಲಿ ನಮ್ಮಂತೆ ಬಾಳುತ್ತಿದ್ದ ಇವರು ಇಂದು ಯಾವುದೋ ಕಾರಣಗಳಿಂದ ಬೀದಿಗೆ ಬಂದು ಮಾನಸಿಕ ಅಸ್ವಸ್ಥರಾಗಿದ್ದಾರೆ ಅಥವಾ ಮಾನಸಿಕ ಅಸ್ವಸ್ಥರಂತೆ ಗೋಚರಿಸುತ್ತಾರೆ.

ಆದರೆ ಅಂತಹವರ ಹತ್ತಿರ ಹೋಗಿ ಮಾತಾಡಿದರೆ ಅವರಲ್ಲಿ ಬಹಳಷ್ಟು ಹೇಳಲಿಕ್ಕೆ ಇರುತ್ತದೆ. ಆದರೆ ನಮಗೆ ಸ್ವಲ್ಪ ತಾಳ್ಮೆ ಮತ್ತು ಕೇಳುವ ಮನಸ್ಸು ಇರಬೇಕು. ಅವರಿಗೆ ನಾವು ಹೊಸ ಬದುಕನ್ನು ಕೊಡಲಿಕ್ಕೆ ಸಾಧ್ಯವಿಲ್ಲದಿದ್ದರೂ ಅವರಿಗೆ ಒಂದು ಸಾಂತ್ವನ, ಪ್ರೀತಿ, ಅಕ್ಕರೆಯನ್ನು ತೋರಿಸಬಹುದು. ಇಲ್ಲದಿದ್ದರೆ ಅವರಂತೆ ನಾವೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬರಲು ಒಂದು ಸಣ್ಣ ಪ್ರಳಯ ಸಾಕಾಗಬಹದು.

Leave a Reply