ಬೆಂಗಳೂರು: ತನಗೆ ಆಸಕ್ತಿಯಿಲ್ಲದ ವಿಷಯದಲ್ಲಿ ಕಲಿಯಲು ಒತ್ತಾಯಿಸಿದ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಕರ್ಮಾ ಡೆಮಾ (21) ಎಂದು ಗುರುತಿಸಲಾಗಿದೆ.
ಫ್ಯಾಷನ್ ಡಿಸೈನ್ ಕೋರ್ಸ್ ಮಾಡಲು ಇಚ್ಚೆಯಿಲ್ಲದಿದ್ದರೂ ಮಾಡುವಂತೆ ಒತ್ತಾಯಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆಚಾರ್ಯ ಸ್ಕೂಲ್ ಆಫ್ ಡಿಸೈನ್ ನ ವಿದ್ಯಾರ್ಥಿನಿಯಾಗಿದ್ದ ಡೆಮಾ ಹಾಸ್ಟೆಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆಗೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply