ಶಾಲಾ ವಿದ್ಯಾರ್ಥಿಗಳ ಆಹ್ಲಾದಕರ ಪಿಕ್ನಿಕ್ ತ್ರಾಸದಾಯಕ ಪರಿಣಮಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಪೂರ್ವ ಚಂಪಾರಣ್ ಜಿಲ್ಲೆಯ ಶಾಲೆಯೊಂದರ ಮಕ್ಕಳು ಬಸ್ಸಿನಲ್ಲಿ ಪಿಕ್ನಿಕ್ ಹೋಗಿದ್ದಾಗ ಪ್ರಯಾಣದ ವೇಳೆ ಅವರ ಬಸ್ ಕೆಟ್ಟಿತು. ಆ ಸಮಯದಲ್ಲಿ ಇತರ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣದಿಂದ ಮಕ್ಕಳನ್ನು ಅಧ್ಯಾಪಕರು ಪಾಟ್ನಾ ಮೃಗಾಲಯದ ಹೊರಗಿನ ರಸ್ತೆಗಳಲ್ಲಿ ಮಲಗಿಸಿದ್ದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮರುದಿವಸ ಈ ವಿಷಯ ವೈರಲ್ ಆಗಿದ್ದು ಪ್ರೌಢಶಾಲೆಯ ಪ್ರಾಂಶುಪಾಲ ಆನಂದ ಕುಮಾರ್ ಸಿಂಗ್ ರನ್ನು ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತು ಗೊಳಿಸಿದ್ದಾರೆ.

ಮುಖ್ಯಮಂತ್ರಿ ಬಿಹಾರ ದರ್ಶನ್ ಯೋಜನೆಯ ಭಾಗವಾಗಿ ಐತಿಹಾಸಿಕ ಸ್ಮಾರಕಗಳ ಪ್ರವಾಸಗಳನ್ನು ಆಯೋಜಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪಿಕ್ನಿಕ್ ಕರೆದು ಕೊಂಡು ಹೋಗಲಾಗಿತ್ತು. ಈ ಮೃಗಾಲಯವು ಮುಖ್ಯಮಂತ್ರಿಯವರ ನಿವಾಸದ ಸಮೀಪ ನೆಲೆಗೊಂಡಿದ್ದರೂ ಆ ಸನ್ನಿವೇಶದಲ್ಲಿ ಯಾವುದೇ ವ್ಯವಸ್ಥೆ ಲಭ್ಯವಾಗಿಲ್ಲ. ಮಾತ್ರವಲ್ಲ,
ಹಲವಾರು ವಿಐಪಿಗಳ ಬಂಗಲೆಗಳು ಮೃಗಾಲಯದ ಬಳಿ ಇದ್ದವು. ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇರುವುದು ಮತ್ತು ಸರ್ಕಾರದ ಹೆಸರನ್ನು ಹಾಳು ಮಾಡಿದ್ದಕ್ಕಾಗಿ ಶಿಕ್ಷಕನು ಆನಂದ್ ರನ್ನು ಅಮಾನತು ಗೊಳಿಸಲಾಗಿದೆ.

Leave a Reply