ಭಾರತದಲ್ಲಿ ಜನಾಂಗೀಯ ಘಟನೆಗಳು ಇಲ್ಲ ಎಂದುಕೊಂಡಿರಾ? ಹಾಗೆ ಭಾವಿಸಿದರೆ ಅದು ತಪ್ಪು. ಕಪ್ಪು ಮತ್ತು ಬಿಳಿ ಪಾರಮ್ಯ ಈಗಲೂ ಒಂದಲ್ಲೊಂದು ಕಡೆ ಕಂಡು ಬರುತ್ತದೆ.

ತನ್ನ ಮೈಬಣ್ಣವನ್ನು ಸಹಪಾಠಿಗಳು ನಿಂದಿಸುತ್ತಾರೆ ಎಂಬ ಕಾರಣಕ್ಕೆ ಲಾವಣ್ಯ ಎಂಬ ಪುಟ್ಟ ಬಾಲಕಿ ಆತ್ಮಹತ್ಯೆ ಮಾಡಿದ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ನಡೆದಿದೆ. ಮೇಡಕ್ ಹೈಸ್ಕೂಲಿನ 9 ನೇ ತರಗತಿಯ 14 ವರ್ಷದ ಲಾವಣ್ಯ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

ಇಬ್ಬರು ಸಹಪಾಠಿಗಳು ಆಕೆಯನ್ನು ಕುರೂಪಿ ಹಾಗೂ ಕಪ್ಪು ಮೈಬಣ್ಣದವಳು ಕರೆದಿದ್ದು , ಹೀಗೆ ಮೊದಲ ಬಾರಿ ಹೀಯಾಳಿಸಲ್ಪಟ್ಟಾಗ ಆಕೆ ಮನೆಗೆ ಹೋಗಿ ತನ್ನ ಕೈಯನ್ನು ಮುರಿದಿದ್ದಳು. ಇದನ್ನು ಆಕೆಯ ಶಿಕ್ಷಕರು ಮೂರ್ಖತನ ಎಂದು ಕರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 2 ರಂದು ಸೀಮೆಎಣ್ಣೆ ಸುರಿದು ತನ್ನನ್ನೇ ಹೊತ್ತಿಸಿಕೊಂಡ ಲಾವಣ್ಯ 45 ಶೇಡಕ ಸುಟ್ಟಗಾಯಗಳಿಂದ ಸೋಮವಾರ ಮೃತಪಟ್ಟಿದ್ದಾಳೆ. ಆಕೆ ಹಾಗೆ ಹಿಯಾಳಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗುಮ್ಮಡಿದಾಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟ್ರ್ ಜಿ ಪ್ರಶಾಂತ್ ಹೇಳಿದ್ದಾರೆ.

Leave a Reply