ಆಕಾಶ ವೀಕ್ಷಕರಿಗೆ ಇದು ಸುಗ್ಗಿಯ ಕಾಲ. ವರ್ಷಾರಂಭದಲ್ಲೇ ಸೂಪರ್ ಮೂನ್ ನೋಡಿ ಆನಂದಿಸಿದ ಮೇಲೆ ಈಗ ನಾಸಾದಿಂದ ಹೊಸ ಹೇಳಿಕೆಯೊಂದು ಹೊರ ಬಿದ್ದಿದೆ.

1866 ರ ನಂತರ ಇದೇ ಮೊದಲ ಬಾರಿಗೆ ಇದೇ ತಿಂಗಳು ಜನವರಿ 31 ರಂದು ಸೂಪರ್ ನೀಲಿ ಚಂದ್ರ ಗ್ರಹಣ (ಸೂಪರ್ ಬ್ಲೂ ಬ್ಲಡ್ ಮೂನ್) ನಡೆಯಲಿದೆ ಎಂದು ನಾಸಾ ಹೇಳಿಕೊಂಡಿದೆ.

ಈಗಾಗಲೇ ಹೊಸ ವರ್ಷದ ಮೊದಲ ದಿನದಲ್ಲೇ ಸೂಪರ್ ವೂಲ್ಫ್ ಮೂನ್ (ವರ್ಷದ ಮೊದಲ ಹುಣ್ಣಿಮೆಗೆ ವೂಲ್ಫ್ ಮೂನ್ ಎಂದು ಕರೆಯುತ್ತಾರೆ) ನೋಡಿಯಾಗಿದೆ. ಆಗ ಚಂದ್ರನು 14% ರಷ್ಟು ದೊಡ್ಡದಾಗಿದ್ದು 30% ರಷ್ಟು ಆಕಾಶದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದ ಹಾಗೂ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿದ್ದ.

ಮುಂದಿನ ಆಕಾಶ-ವೀಕ್ಷಣೆ ಇನ್ನೂ ಅದ್ಭುತ ಎಂದು ನಾಸಾ ಭರವಸೆ ನೀಡಿದೆ

ಯುಎಸ್ ಸ್ಪೇಸ್ ಏಜೆನ್ಸಿಯ ಪ್ರಕಾರ, ಎರಡನೇ ಸೂಪರ್ ಮೂನ್ ಪಶ್ಚಿಮದ ಉತ್ತರ ಅಮೆರಿಕಾದಿಂದ ಪೆಸಿಫಿಕ್ ವರೆಗೆ ಹಾಗೂ ಪೂರ್ವ ಏಷ್ಯಾದಲ್ಲಿ ವೀಕ್ಷಿಸಬಹುದು.

ಕ್ಯಾಲೆಂಡರ್ ತಿಂಗಳಲ್ಲಿ ಎರಡನೆಯ ಹುಣ್ಣಿಮೆಯನ್ನು ಬ್ಲೂ ಮೂನ್ ಎನ್ನುತ್ತಾರೆ. ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪ ಬರುವುದನ್ನು ಸೂಪರ್ ಮೂನ್ ಎಂದು ಹೇಳುತ್ತಾರೆ. ಸೂಪರ್ ಬ್ಲೂ ಮೂನ್ ಸರಾಸರಿ ಎರಡೂವರೆ ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಆದರೆ ಸೂಪರ್ ಬ್ಲೂ ಮೂನ್ ನ ಗ್ರಹಣವು 1866 ರ ನಂತರ ಇದೇ ಮೊದಲ ಬಾರಿಗೆ ನಡೆಯಲಿದೆ.

ಕರ್ನಾಟಕದಲ್ಲಿ ಚಂದ್ರಗ್ರಹಣ ವೀಕ್ಷಿಸುವ ಸಮಯ
ಬೆಂಗಳೂರು     –   6.15
ಮೈಸೂರು      –   6.20
ಬಾಗಲಕೋಟೆ  –   6.18
ಧಾರವಾಡ     –   6.22
ಮಂಗಳೂರು   –   6.27
ಕಲಬುರಗಿ     –   6.12

Leave a Reply