ನವದೆಹಲಿ: ತನ್ನ ಪರಿತ್ಯಕ್ತ ಪತಿಯು ಕುವೈಟ್‌ ನಲ್ಲಿದ್ದು ಮಗಳು ಅಲ್ಲಿಗೆ ತೆರಳುವುದು ತನಗಿಷ್ಟವಿಲ್ಲವೆಂದು ತಾಯಿಯು ತನ್ನ ಮಗಳನ್ನು ಕುವೈಟ್ ಗೆ ಹೋಗುವುದರಿಂದ ತಡೆಹಿಡಿಯಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ 19 ವರ್ಷ ಪ್ರಾಯಪೂರ್ತಿಯಾದ ಹುಡುಗಿಯು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಂಚೆತೆರಪಿನ ಶಿಕ್ಷಣ ಪಡೆಯುತ್ತಿದ್ದು ಇದರ ಜೊತೆಗೆ ಇಂಟರ್ನಶಿಪ್ ಗಾಗಿ ಹುವೈಯಿ ಟೆಕ್ನಾಲಜೀಸ್ ಕುವೈಟ್ ಗೆ ತೆರಳುತ್ತಿದ್ದು ತನ್ನ ತಂದೆಯೊಂದಿಗಿದ್ದು ಇಂಟರ್ನಶಿಪ್ ಮುಗಿಸಿಕೊಂಡು ಮರಳುವುದಾಗಿ ಹೇಳಿಕೊಂಡಿದ್ದಳು.
ತಾಯಿಯ ದುಗುಡವನ್ನು ಆಧಾರವಾಗಿಟ್ಟುಕೊಂಡು ಓರ್ವ ಪ್ರಾಯಪೂರ್ತಿಯಾದ ಯುವತಿಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ವೆಂದು ಸುಪ್ರೀಂ ಆದೇಶಿಸಿದ್ದು ಸಂವಿಧಾನವು ಮಹಿಳಾಪರ ಹಕ್ಕುಗಳಿಗೆ ಮನ್ನಣೆ ನೀಡುತ್ತದೆ ಎಂದಿದೆ. ವಯಸ್ಕ ಹುಡುಗಿಯರು ಅವರಿಗಿಷ್ಟವಿರುವ ಉಡುಗೆ ,ಉದ್ಯೋಗ ಮತ್ತು ತಮಗಿಷ್ಟವಿರುವ ಸಂಗಾತಿಯನ್ನು ಆಯ್ದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದ್ದು ಅವರನ್ನು ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ ಎಂದಿದೆ. ಅವಳ ಆಯ್ಕೆಯು ಅವಳದ್ದೇ ಆಗಿರುವಾಗ ಅದು ಅವಳ ಆಯ್ಕೆಯಾಗಿಯೇ ಉಳಿಯುವುದು ಎಂದು.ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ,ಜಸ್ಟೀಸ್ ಎ.ಎಮ್.ಖಾನ್ ವಿಲ್ ಕರ್ ಮತ್ತು ಜಸ್ಟೀಸ್ ಡಿ ವೈ ಚಂದ್ರ ಚೂಡಾರವರ ಪೀಠವು ತೀರ್ಪು ನೀಡಿದೆ.

Leave a Reply