Representational Image

ವಿದ್ಯಾರ್ಥಿಗೆ 99 ಅಂಕಗಳ ಬದಲು 0 ನೀಡಿದ ತೆಲಂಗಾಣದ ಟೀಚರೊಬ್ಬರನ್ನು ಅಮಾನತುಗೊಳಿಸಲಾಗಿದೆ.ತೆಲಂಗಾಣ ಸ್ಟೇಟ್ ಬೋರ್ಡ್ ಆಫ್ ಇಂಟರ್ ಮೀಡಿಯೆಟ್ ಎಜುಕೇಶನ್ ವಿದ್ಯಾರ್ಥಿಯೊಬ್ಬನಿಗೆ 99 ಅಂಕಗಳ ಬದಲು 0 ಅಂಕ ನೀಡಿದ ಕಾರಣ ಅಧ್ಯಾಪಕರನ್ನು ಅಮಾನತು ಗೊಳಿಸಲಾಗಿದೆ. ಅದೇ ರೀತಿ, ತೆಲುಗು ಪೇಪರ್ ನಲ್ಲಿ99 ರ ಬದಲು 0 ಅಂಕ ನೀಡಿದ್ದಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರಿಗೆ 5,000 ರೂಪಾಯಿ ದಂಡವನ್ನು ವಿಧಿಸಲಾಯಿತು. ವಾಸ್ತವದಲ್ಲಿ ಬೋರ್ಡ್ ನ ತಪ್ಪುಗಳಿಂದಾಗಿ ಹಲವು ವಿದ್ಯಾರ್ಥಿ ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲುಗು ಸಬ್ಜೆಕ್ಟ್ ನಲ್ಲಿ ‘0’ ಅಂಕ ಗಳಿಸಿದ ಕಾರಣ ನವ್ಯ ಮಧ್ಯಂತರ ದ್ವಿತೀಯ ವರ್ಷದಲ್ಲಿ (12 ನೇ ತರಗತಿಯ) ಅನುತ್ತೀರ್ಣಳಾಗಿದ್ದಾಳೆ. ಮಂಚೇರಿಯಲ್ ಜಿಲ್ಲೆಯ (ಹಾಲ್ ಟಿಕೆಟ್ ಸಂಖ್ಯೆ 1933216764) ಈ ವಿದ್ಯಾರ್ಥಿ ವಾಣಿಜ್ಯದಲ್ಲಿ 99 ಅಂಕ , ಸಿವಿಕ್ಸ್ನಲ್ಲಿ 96, ಅರ್ಥಶಾಸ್ತ್ರದಲ್ಲಿ 95 ಮತ್ತು ಇಂಗ್ಲಿಷ್ನಲ್ಲಿ 68 ಅಂಕಗಳನ್ನು ಗಳಿಸಿದ್ದಾರೆ. ನವ್ಯಳಂತಹ ವಿದ್ಯಾರ್ಥಿನಿ ಧೈರ್ಯ ಮಾಡಿ ಮುಂದೆ ಬಂದಳು, ಆದರೆ ಇಂತಹ ಎಡವಟ್ಟಿನಿಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಾರೆ ಎಂದು ತೆಲುಗು ಪತ್ರಿಕೆ ವರದಿ ಮಾಡಿದೆ. ಫಲಿತಾಂಶದ ಬಳಿಕ ಸುಮಾರು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆ.

Leave a Reply