ಪಾಟ್ನ: ಎಸೆಸೆಲ್ಸಿಯ ವಿದ್ಯಾರ್ಥಿಯೊಬ್ಬನನ್ನು ಆತನ ಸ್ನೇಹಿತರು ಕರೆದುಕೊಂಡು ಹೋಗಿ ಕೊಲೆ ಮಾಡಿದ ಘಟನೆ ಬಿಹಾರದ ಪಾಟ್ನ ಸಮೀಪ ನಡೆದಿದೆ. ಕೊಲೆಯಾದ ಬಾಲಕನ್ನು ಹೋಮಿಯೊಪತಿ ವೈದ್ಯರ ಪುತ್ರ 10ನೆ ತರಗತಿ ವಿದ್ಯಾರ್ಥಿ ಸತ್ಯಂ ಎಂದು ಗುರುತಿಸಲಾಗಿದ್ದು ಆತನ ಮೂವರು ಗೆಳೆಯರು ಕೊಲೆ ಮಾಡಿದ್ದಾರೆ. ಸತ್ಯಂ ಗೆಳೆಯರೊಬ್ಬನ ಗೆಳತಿಯನ್ನು ಅಪಮಾನಿಸಿದ್ದು ಕೊಲೆಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಚಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬಾಲಕನನ್ನು ಸ್ನೇಹಿತರು ಸ್ಥಳೀಯ ಆರ್‍ಪಿಎಸ್ ಕಾಲೇಜಿನ ಕುರುಚಲು ಗಿಡಗಳ ಬಳಿಗೆ ಕರೆದುಕೊಂಡು ಹೋಗಿ ಕೊಂದು ಹಾಕಿ ಮೃತದೇಹವ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಕೋಚಿಂಗ್ ಹೋದ ಬಾಲಕ ಮರಳಿ ಬರುವುದು ಕಂಡು ಬಾರದ್ದರಿಂದ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ತನಿಖೆ ನಡೆಸಿದಾಗ ಬಾಲಕನ ಬಾಲಕನ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂದಿಸಿ ಮೃತ ಸತ್ಯಂನ ಮೂವರು ಗೆಳೆಯರನ್ನು ಬಂಧಿಸಲಾಗಿದೆ.

ಸೆಪ್ಟಂಬರ್ 27ರಂದು ಸತ್ಯಂ ನಾಪತ್ತೆಯಾಗಿದ್ದನು. ಮರು ದಿವಸ ಐವತ್ತು ಲಕ್ಷ ರೂಪಾಯಿಯ ಬೇಡಿಕೆಯಿರಿಸಿ ಆತನ ಹೆತ್ತವರಿಗೆ ಫೋನ್ ಕರೆ ಬಂದಿತ್ತು. ಕರೆಯ ಜಾಡು ಹಿಡಿದು ಹೋದಾಗ ಪೊಲೀಸರಿಗೆ ಸತ್ಯಂನ ಗೆಳೆಯರು ಸಿಕ್ಕಿಬಿದ್ದರು. ಸತ್ಯಂನ್ನು ಕಾಲೇಜಿನ ಸಮೀಪದ ಕುರುಚಲು ಗಿಡಗಳ ನಡುವೆ ಕರೆದುಕೊಂಡು ಹೋಗಿ ಅಮಲು ಪದಾರ್ಥ ತಿನ್ನಿಸಿ ಪ್ರಜ್ಞೆ ಕಳಕೊಂಡ ಬಳಿಕ ಇರಿದು ಕೊಂದಿರುವುದಾಗಿ ಗೆಳೆಯರು ಪೊಲೀಸರಿಗೆ ತಿಳಿಸಿದ್ದಾರೆ.

Leave a Reply