ಹೊಸದಿಲ್ಲಿ: ತೆಲಂಗಾಣದಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಒಪಿರಾವತ್ ಹೇಳಿದರು. ನಾಲ್ಕು ರಾಜ್ಯಗಳ ಚುನಾವಣೆಯ ಜೊತೆಯಲ್ಲಿ ಡಿಸೆಂಬರ್‍ನಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ತೆಲಂಗಾಣ ವಿಧಾನಸಭೆ ವಿಸರ್ಜಿಸದ ನಂತರ ಉಸ್ತುವರಿ ಸರಕಾರ ಹೆಚ್ಚುಕಾಲ ಇರುವಂತಿಲ್ಲ ಎಂದು ಸುಪ್ರೀಂಕೋರ್ಟಿನ ತೀರ್ಪಿದೆ. ಉಸ್ತುವಾರಿ ಸರಕಾರ ಹೆಚ್ಚು ಕಾಲ ನಡೆದರೆ ಅವರು ಜನರ ಮೇಲೆ ಪ್ರಭಾವ ಬೀರಲು ಯತ್ನಿಸಬಹುದು. ವಿಧಾನಸಭೆ ವಿಸರ್ಜನೆಗೊಂಡ ಬಳಿಕ ಆರು ತಿಂಗಳಿಗಿಂತ ಹೆಚ್ಚು ಕಾಲ ಉಸ್ತುವಾರಿ ಸರಕಾರ ಮುಂದುವರಿಯುವಂತಿಲ್ಲ. ಸುಪ್ರೀಮ್ ಕೋರ್ಟಿ ನ ಆದೇಶದನ್ವಯ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ತೆಲಂಗಾಣದ ಚುನಾವಣೆಯನ್ನು ಡಿಸೆಂಬರ್‍ನಲಿ ನಡೆಸಲು ನಿರ್ಧರಿಸಿತು.

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಡ, ಮಿಝರಂ ಮೊದಲಾದ ರಾಜ್ಯಗಳ ಜೊತೆ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ ಎಂದ ವರದಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

Leave a Reply