ಗುಜರಾತ್ ನಲ್ಲಿ ಬುಧ್ಧಿಮಾಂದ್ಯ ವ್ಯಕ್ತಿಗಾಗಿ ವಧುವಿಲ್ಲದೇ ಮದುವೆಯನ್ನು ಆಯೋಜಿಸಿದ ಘಟನೆ ನಡೆದಿದೆ.
ಗುಜರಾತಿನ ಹಿಮ್ಮತ್ ನಗರದಲ್ಲಿ ಒಬ್ಬ ವ್ಯಕ್ತಿಯ ಮದುವೆಯನ್ನು ವಧು ಇಲ್ಲದೆಯೇ ಅದ್ದೂರಿಯಾಗಿ ಆಯೋಜಿಸಲಾಯಿತು.
ವಾಸ್ತವದಲ್ಲಿ 27 ವರ್ಷದ ಅಜಯ್ ಮಾನಸಿಕ ರೂಪದಲ್ಲಿ ವಿಕಲಾಂಗ. ಇದರಿಂದಾಗಿ ಅವನ ಮದುವೆ ಆಗುತ್ತಿರಲಿಲ್ಲ.
ಆದರೆ ಮದುವೆಯ ಬಗೆಗಿನ ಅವನ ಆಸೆಯನ್ನು ನೋಡಿ ಅವನ ಸಂಬಂಧಿಕರು ಎಲ್ಲಾ ರೀತಿಯ ರೀತಿ-ರಿವಾಜುಗಳೊಂದಿಗೆ ಅವನ ಮೆಹೆಂದಿ,ಸಂಗೀತ್ ಹಾಗೂ ಮದುವೆಯನ್ನು ಆಯೋಜಿಸಿದ್ದಾರೆ.

ಅಜಯ್ ಯಾವಾಗಲೂ ತನಗೆ ವಿವಾಹ ಆಗಬೇಕೆಂದು ಬಯಸಿದ್ದರು. ಮದುವೆ ದಿಬ್ಬಣ ಹಾದುಹೋಗುವುದನ್ನು ನೋಡಿದಾಗ, ಅಥವಾ ಯಾರೊಬ್ಬರ ಮದುವೆಗೆ ಹಾಜರಾಗುತ್ತಿದ್ದಾಗ ಆತ ಆಸೆಗಣ್ಣಿನೊಂದಿಗೆ ನೋಡುತ್ತಿದ್ದ. ಯಾವಾಗ ನನ್ನ ಮದುವೆ ಎಂದು ಅವನು ಆಗಾಗ ಕೇಳುತ್ತಿದ್ದ. ಅಜಯ್ ಬುದ್ದಿಮಾಂದ್ಯ ಆದ ಕಾರಣ ಅವನಿಗೆ ಕಂಡು ಹಿಡಿಯುವುದು ಕಷ್ಟ ಎಂದು ತಿಳಿದಿತ್ತು. ಅದಕ್ಕೆ ಅವನ ಆಸೆ ತೀರಿಸಲು ಹೀಗೆ ಮದುವೆ ಮಾಡಿಸಿದೆವು. ಸುಮಾರು 800 ಮಂದಿ ಮದುವೆಯಲ್ಲಿ ಭಾಗವಹಿಸಿದ್ದು ಎರಡು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

Leave a Reply