ಇ-ಕಾಮರ್ಸ್ ಕಂಪೆನಿಯಾದ ಅಮೆಝಾನ್ ಹಿಂದೂ ದೇವರನ್ನು ಅವಮಾನಿಸಿದ್ದು ಅದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಮೆರಿಕ ಮೂಲಕದ ಕಂಪನಿಯ ವಿರುದ್ದ ಟಾಯ್ಲೆಟ್ ಸೀಟ್ ಕವರ್ ಗಳಲ್ಲಿ ಹಿಂದೂ ದೇವತೆಗಳ ಚಿತ್ರ ಮುದ್ರಿಸಿದ್ದಕ್ಕೆ ನೋಯ್ಡಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಂಪೆನಿಯ ಅಮರಿಕದ ವೆಬ್ಸೈಟ್ ಮೂಲಕ ಈ ಉತ್ಪನ್ನ ಮಾರಾಟವಾಗಿದ್ದು ಇದರ ಚಿತ್ರಗಳು ಹೊರ ಬರುವುದರೊಂದಿಗೆ ಕಂಪೆನಿಯ ವಿರುದ್ಧ ಬಹಿಷ್ಕಾರ ಕೂಗು ವ್ಯಾಪಕವಾಗಿತ್ತು. ಇದೇ ವೇಳೆ ಈ ಉತ್ಪನ್ನಗಳನ್ನು ವೆಬ್ಸೈಟ್ನಿಂದ ತೆರವುಗೊಳಿಸಲಾಗಿದೆ ಎಂದು ಕಂಪೆನಿ ವಕ್ತಾರ ತಿಳಿಸಿದರು. ಎರಡು ಗುಂಪುಗಳ ನಡುವೆ ದ್ವೇಷ ಸೃಷ್ಟಿಸಿದ ಆರೋಪದಲ್ಲಿ ಪೊಲೀಸರಿಗೆ ದೂರು ಸಿಕ್ಕಿದೆ. ನೊಯಿಡ ಸೆಕ್ಟರ್ 58ರ ಪೊಲೀಸರು ದೂರು ಪಡೆದು ದಾಖಲಿಸಿದ್ದಾರೆ. ಭಾರತದಂಡ ಸಂಹಿತೆ ಕಲ153ರ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಯಿತೆಂದು ಪೊಲೀಸರು ಹೇಳಿದರು.
Mistake is a mistake when it is done once or twice
But #Amazon is a repeat offender who seems to enjoy hurting the religious sentiments of #Hindus
Do u have the guts to sell products mocking Islam or Christianity or Hindus are soft targets??
Shame on Amazon#BoycottAmazon pic.twitter.com/Y7mmi2fhzv
— Sushil Dixit (Adv) (@advosushildixit) May 16, 2019