ಹೀರೋಯಿಸಮ್ ಪ್ರತಿಯೊಬ್ಬರಲ್ಲಿ ಇರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಅದು ಹೊರ ಬರುತ್ತದೆ. ಬಿಹಾರದಲ್ಲಿ 12 ವರ್ಷದ ಬಾಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿ ಹಲವಾರು ಜೀವಗಳನ್ನು ಉಳಿಸಿಕೊಂಡಿದ್ದಾನೆ.

ಐದನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗ ಭೀಮ್ ಯಾದವ್, ಪಶ್ಚಿಮ ಚಂಪಾರಣ್ ಜಿಲ್ಲೆಯ ಮುರಿದ ರೇಲ್ರೋಡ್ ಟ್ರ್ಯಾಕ್ಗೆ ಮುಂಚಿತವಾಗಿ ರೈಲನ್ನು ನಿಲ್ಲುವಂತೆ ಮಾಡಿದ್ದಾನೆ.

ಗೋರಖ್ಪುರ್-ನರ್ಕಾಟಾಗಂಜ್ ರೈಲ್ವೆ ಮಾರ್ಗದಲ್ಲಿ ಮುರಿದ ರೈಲ್ವೆ ಹಳಿಯನ್ನು ಕಂಡ ಭೀಮ್ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಓಡುತ್ತಾ ತನ್ನ ಕೆಂಪು ಶರ್ಟ್ ಅನ್ನು ತೋರಿಸಿ ವೇಗವಾದ ರೈಲು ನಿಲ್ಲುವಂತೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾನೆ.

ಆತನ ಶೌರ್ಯಕ್ಕಾಗಿ ಅವನಿಗೆ ಬಹುಮಾನ ಕೊಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದಾಗಿ ಎಲ್ಕಾ ಪ್ರಯಾಣಿಕರ ಜೀವ ಉಳಿದಿದೆ. ಪ್ರತಿಫಲ ನಗದು ಅಥವಾ ಬೇರೆ ರೂಪದಲ್ಲಿರಬಹುದು. ನಾವು ಇನ್ನೂ ಅದರ ಬಗ್ಗೆ ನಿರ್ಧರಿಸುತ್ತೇವೆ ಆದರೆ ಒಂದು ವಿಷಯ ಖಚಿತವಾಗಿದೆ, ಅವರು ಬಹುಮಾನ ಪಡೆಯಲಿದ್ದಾರೆ ಎಂದು ಸ್ಥಳೀಯ ಜಿಲ್ಲೆಯ ಅಧಿಕಾರಿ ಹರೇಂದ್ರ ಝಾ ತಿಳಿಸಿದ್ದಾರೆ.

Leave a Reply