ಲಖನೌ: ತ್ರಿವಳಿ ತಲಾಖ್​ ನಿಷೇಧ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಈಗಾಗಲೇ ಮಸೂದೆ ವಿರುದ್ಧ ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಧ್ವನಿ ಎತ್ತಿದೆ. ಒಂದು ವೇಳೆ ಮಸೂದೆಯಲ್ಲಿ ಕುರಾನ್​ಗೆ ವಿರುದ್ಧವಾದ ಅಂಶಗಳಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿವೆ.

ಮದುವೆ ಎಂಬುದು ಒಂದು ಒಪ್ಪಂದ. ಅದನ್ನು ಯಾರೇ ಮುರಿದರೂ ಅವರಿಗೆ ಶಿಕ್ಷೆಯಾಗಬೇಕು. ಆದರೆ ಮಸೂದೆ ಕುರಾನ್​ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಯಾವ ಮುಸ್ಲಿಂ ಮಹಿಳೆಯೂ ಅದನ್ನು ಒಪ್ಪುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿ ನ್ಯಾಯ ಮಂಡಳಿ (AIMWPLB)ಯ ಅಧ್ಯಕ್ಷೆ ಶೈಸ್ತಾ ಅಂಬೆರ್​ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಯದೆ ಈ ಮಸೂದೆ ಅಂಗೀಕಾರವಾದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮುಸ್ಲಿಂ ಮಹಿಳಾ ಲೀಗ್​ ನ ಅಧ್ಯಕ್ಷೆ ನೈಶ್​ ಹಸನ್​ ತಿಳಿಸಿದ್ದಾರೆ.

Leave a Reply