ನವದೆಹಲಿ : ತ್ರಿವಳಿ ತಲಾಖ್ ನಿಷೇಧಿಸುವ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.

ಕಳೆದ ವರ್ಷ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಗೆ ಅನುಮೋದನೆ ಸಿಕ್ಕಿತ್ತು. ಆದರೆ ರಾಜ್ಯ ಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧದಿಂದ ಮಸೂದೆ ಅಂಗೀಕಾರ ಪಡೆಯಲು ವಿಫಲ ಆಯಿತು. ರಾಜ್ಯ ಸಭೆಯಲ್ಲಿ ಪೂರ್ಣ ಬಹುಮತ ಇಲ್ಲದ ಕಾರಣ ಮಸೂದೆ ಅಂಗೀಕಾರಕ್ಕೆ ಅಡ್ಡಿಯಾಗಿತ್ತು. ಈ ನಿಟ್ಟಿನಲ್ಲಿ ಲೋಕ ಸಭೆಯಲ್ಲಿ ಮಂಡನೆಯಾದ ೬ ತಿಂಗಳೊಳಗೆ ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಿದೆ.

ತಕ್ಷಣಕ್ಕೆ ನೀಡುವ ತ್ರಿವಳಿ ತಲಾಕ್ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟು ಈ ಹಿಂದೆಯೇ ತೀರ್ಪು ನೀಡಿತ್ತು. ರಾಷ್ಟ್ರಪತಿಯವರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದರೆ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲ್ಪಡುವುದು. ಮಾತ್ರವಲ್ಲ ಮೂರು ವರ್ಷಗಳ ಜೈಲು ಮತ್ತು ದಂಡನೆಗೆ ಅವಕಾಶ ಇದೆ. ಮುಸ್ಲಿಂ ಮಹಿಳೆಯರು ಜೀವನಾಂಶಕ್ಕೂ ಅರ್ಹ ರಾಗಲಿದ್ದಾರೆ. ಪ್ರಕರಣದ ಆರೋಪಿಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ಮಾತ್ರ ಜಾಮೀನು ನೀಡಬಹುದಾದ ಅಧಿಕಾರವಿದೆ. ಜಾಮೀನು ರಹಿತ ಅಪರಾಧಕ್ಕೆ ತಿದ್ದುಪಡಿ ತರಬೇಕೆಂದು ಹಲವು ಮುಸ್ಲಿಂ ಸಂಘಟನೆಗಳ ಬೇಡಿಕೆಯೂ ಆಗಿತ್ತು.

Leave a Reply