ಸಾಂದರ್ಭಿಕ ಚಿತ್ರ

ತಿರುವನಂತಪುರಂ; ಮುತ್ತಲಾಕ್ ಕ್ರಿಮಿನಲ್ ಅಪರಾಧಗೊಳಿಸುವ ಕೇಂದ್ರ ಸರಕಾರದ ಸುಗ್ರೀವಾಜ್ಞೆಯ ವಿರುದ್ಧ ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಸುಪ್ರೀಂ ಕೋರ್ಟನ್ನು ಸಂಪರ್ಕಿಸಿದೆ.

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪನ್ನು ಮತ್ತು ಧಾರ್ಮಿಕ ಮೂಲಭೂತ ಹಕ್ಕನ್ನು ಕೇಂದ್ರ ಸರಕಾರದ ಉಲ್ಲಂಘಿಸುತ್ತಿದೆ ಎಂದು ಸಮಸ್ತ ಕೇರಳ ಜಮ್ ಇಯ್ಯತ್ತುಲ್ ಉಲಮಾ ದೂರಿನಲ್ಲಿ ತಿಳಿಸಿದೆ.

ಆದ್ದರಿಂದ ಸುಗ್ರಿವಾಜ್ಞೆಗೆ ತಡೆಯಾಜ್ಞೆ ನೀಡಬೇಕೆಂದು ಸಮಸ್ತ ಅರ್ಜಿಯಲ್ಲಿ ವಾದಿಸಿದೆ. ಮುತ್ತಲಾಕ್ ಒಂದೇ ಬಾರಿಗೆ ಹೇಳಿ ವಿವಾಹ ವಿಚ್ಛೇದನ ನಡೆಸಲು ಯತ್ನಿಸಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ಶಿಫಾರಸು ಮಾಡುವ ಸುಗ್ರಿವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ ಹೊರಡಿಸಿದೆ.

ಮಸೂದೆ ರಾಜ್ಯ ಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದಿಂದ ಪಾಸಾಗದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಆದರೆ ಇದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಮಸ್ತ ಕೇರಳ ಜಮ್‍ಇಯತ್ತುಲ್ ಉಲೆಮಾ ಬೆಟ್ಟು ಮಾಡಿದೆ. ಈ ಕಾನೂನಿನಲ್ಲೊಬ್ಬ ಮುತ್ತಲಾಕ್ ಹೇಳಿದರೆ ವಿವಾಹ ವಿಚ್ಛೇದನವಾಗುವುದಿಲ್ಲ. ನಂತರ ಹೇಗೆ ಮುತ್ತಲಾಕ್ ಕ್ರಿಮಿನಲ್ ಅಪರಾಧವಾಗುವುದು ಎಂದು ಸಮಸ್ತ ವಾದಿಸಿದೆ.

ಮದುವೆ ವಿಚ್ಛೇದನ ಕ್ರಮಗಳನ್ನು ಪಾಲಿಸದಿರುವುದು ಮುತ್ತಲಾಕ್‍ನ ವಿಷಯವಾಗಿದೆ. ಇತರ ಧರ್ಮಗಳಲ್ಲಿ ಇಂತಹ ಕ್ರಮೋಲ್ಲಂಘನೆ ಕ್ರಿಮಿನಲ್ ಅಪರಾಧವಲ್ಲ. ಇಸ್ಲಾಮ್ ಧರ್ಮದಲ್ಲಿ ಮಾತ್ರ ಹೇಗೆ ಕ್ರಿಮಿನಲ್ ಅಪರಾಧವಾಗುತ್ತದೆ. ಇದು ಸಮಾನತೆಯ ಕುರಿತ ಹಕ್ಕು ಉಲ್ಲಂಘನೆಯಾಗಿದೆ ಎಂದು ಸಮಸ್ತ ಅರ್ಜಿಯಲ್ಲಿ ಬೆಟ್ಟು ಮಾಡಿದೆ.

ಮುತ್ತಲಾಕ್ ಹೇಳಿದ್ದಾನೆ ಎಂದು ಪತಿಯನ್ನು ಜೈಲಿಗೆ ಹಾಕಿದರೆ ಮದುವೆ ಸಂಬಂಧ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ಸಮಸ್ತ ವಾದಿಸಿದೆ. ಇಂತಹ ವಿಷಯಗಳಲ್ಲಿ ಅಸಹಮತ ವ್ಯಕ್ತಪಡಿಸಿ ದೇಶದಲ್ಲಿ ಪ್ರತಿಪಕ್ಷ ಪಾರ್ಟಿಗಳು ಮುತ್ತಲಾಕ್ ಮಸೂದೆಗೂ ಸುಗ್ರಿವಾಜ್ಞೆಯನ್ನು ದೇಶದ ಪ್ರತಿಪಕ್ಷಗಳು ಟೀಕಿಸುತ್ತಿವೆ ಎಂದು ಸಮಸ್ತ ಅರ್ಜಿಯಲ್ಲಿ ತಿಳಿಸಿದೆ.

Leave a Reply