ಡಿಸೆಂಬರ್ ತಿಂಗಳಿನಲ್ಲಿ ಎಸ್. ಎಮ್ .ಅಭಿಷೇಕ್(12 ವರ್ಷ) ಶಾಲೆಯಿಂದ ಮರಳಿ ಬರುತ್ತಿದ್ದಾಗ ಕ್ರೋಧೋನ್ಮತ್ತ ನಾಯಿಯೊಂದು 3 ವರ್ಷದ ಚಿಕ್ಕಣ್ಣಸ್ವಾಮಿ ಎಂಬ ಮಗುವಿನ ಮೇಲೆ ಆಕ್ರಮಣ ನಡೆಸುತ್ತಿರುವುದನ್ನು ಕಂಡು ಹಿಂದೆ‌ ಮುಂದೆ ಆಲೋಚಿಸದೇ ಮಗುವಿನ ರಕ್ಷಣೆಗಾಗಿ ಧಾವಿಸಿದ ಘಟನೆ ಕಳೆದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೀಗೆಮೇಳಟ್ಟಿ ಗ್ರಾಮದಲ್ಲಿ ನಡೆದಿದೆ.

ನಾಯಿಯು ಮಗುವಿನ ಮೇಲೆ ಆಕ್ರಮಣ ಮಾಡುವುದನ್ನು ಕಂಡರೂ ಜನರು ಮಗುವನ್ನು ರಕ್ಷಿಸಲು ಮುಂದಡಿ ಇಡದೇ ನೋಡುತ್ತಾ ನಿಂತಿದ್ದರು. ಆದರೆ ಅಭಿಷೇಕ್ ಧಾವಿಸಿ ಬಂದು ನಾಯಿಯ ಕುತ್ತಿಗೆ ಹಿಡಿದು ದೂಡಿದನಲ್ಲದೇ ತದನಂತರ ಮಗುವಿನ ರಕ್ಷಣೆಗಾಗಿ ಧಾವಿಸಿದನು. ಗಂಭೀರ ಗಾಯಗಳಾಗಿದ್ದ ಮಗುವನ್ನು ತದನಂತರ ಬೆಂಗಳೂರಿಗೆಚಿಕಿತ್ಸೆ ಗಾಗಿ ಕೊಂಡೊಯ್ಯಲಾಗಿತ್ತು.
ಮಗು ಇದೀಗ ಚೇತರಿಸಿಕೊಂಡಿದೆ.

ಅಭಿಷೇಕ್ ತೋರಿದ ಸಮಯ ಪ್ರಜ್ಞೆ ಹಾಗೂ ಧೈರ್ಯವು ಇದೀಗ ಎಲ್ಲೆಡೆ ಪ್ರಶಂಸೆ ಪಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯರು ಅಭಿಷೇಕ್ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಕೋರಿ ವಿಭಾಗೀಯ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Leave a Reply