ಇತ್ತೀಚಿನ ದಿನಗಳಲ್ಲಿ ಬರೀ ಇಲ್ಲ ಸಲ್ಲದ ಮಸಾಲಾ ಬೆರೆಸಿ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಮಧ್ಯೆ ಯಾವ ಚಾನಲ್ ಗಳನ್ನು ಇಡುವುದು ಎಂದು ಜನರು ತಲೆಯ ಮೆಲೆ ಕೈ ಇಡತೊಡಗಿದ್ದು ಇವೆಲ್ಲದರ ಮಧ್ಯೆ ನೈಜ ವರದಿಯನ್ನು ಪ್ರಸಾರಗೊಳಿಸುವ ಟಿವಿ 9 ಕನ್ನಡ ಜನರ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಒಂದು ವಾರಗಳಿಂದ ಕರಾವಳಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಬಗ್ಗೆ ಪುಂಖಾನುಪುಂಖವಾಗಿ ವರದಿಯನ್ನು ಪ್ರಸಾರ ಮಾಡಿ ಜನರ ನಿದ್ದೆಗೆಡಿಸಿತ್ತು. ಆದರೆ ಟಿವಿ 9 ಮಾತ್ರ ಸುದ್ದಿಯಾಚೆಗಿರುವ ಸತ್ಯವನ್ನು ಜನರೆಡೆಗೆ ತಲುಪಿಸುವ ಪ್ರಯತ್ನವನ್ನು ಮಾಡಿದೆ ಎಂದು ಫೇಸ್‌ಬುಕ್‌ ವಾಟ್ಸಪ್ ಮುಖಾಂತರ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮೆಸೇಜ್ ವೈರಲ್ ಆಗಿದೆ.

ದೀಪಕ್, ಬಶೀರ್ ಅಂತ್ಯ ಸಂಸ್ಕಾರದ ನೇರಪ್ರಸಾರ

ಆದಾಗ್ಯೂ ಕಳೆದ ನಾಲ್ಕು ದಿನಗಳ ದುಷ್ಕರ್ಮಿಗಳ ಕೈಯಿಂದ ಹತನಾದ ದೀಪಕ್‌ ರಾವ್ ಹಾಗು ಬಶೀರ್ ಸಾವಿನ ಅಂತ್ಯಸಂಸ್ಕಾರದ ನೇರ ಪ್ರಸಾರದ ಕಾರ್ಯಕ್ರಮವನ್ನು ಜನರೆಡೆಗೆ ತಲುಪಿಸುವ ಕಾರ್ಯವನ್ನು ಮಾಡುವ ಮೂಲಕ ತಾರತಮ್ಯವನ್ನು ಹೋಗಲಾಡಿಸುವ ಕೆಲಸವನ್ನು ಮಾಡಿದ್ದಾರೆ ಎನ್ನುತ್ತಿದ್ದಾರೆ.

Leave a Reply