ಅವಳಿಗಳಿಗೆ ಪ್ರತ್ಯೇಕ ದಿನ ಹುಟ್ಟುಹಬ್ಬ ಇರುತ್ತದೆಯೇ? ಹೌದು ಈ ಅವಳಿಗಳ ಹುಟ್ಟಿದ ದಿನ ಬೇರೆ ಬೇರೆ.
ಕ್ಯಾಲಿಫೋರ್ನಿಯಾದ ದಂಪತಿ, ತಮ್ಮ ಅವಳಿ ಶಿಶುಗಳು ಒಂದು ತಿಂಗಳು ಮುಂಚಿತವಾಗಿ ಬರಬೇಕೆಂದು ನಿರ್ಧರಿಸಿದರು. ಮತ್ತು ತಮ್ಮ ಜೀವನದಲ್ಲಿ ಅದ್ಭುತ ವಿಲಕ್ಷಣ ಪರಿಸ್ಥಿತಿಯನ್ನು ಸೃಷ್ಟಿಸಿದರು.
ಶಿಶುಗಳು ನಿಮಿಷಗಳ ಅಂತರದಲ್ಲಿ ಹುಟ್ಟಿದವು. ಆದರೆ ಅವುಗಳ ಹುಟ್ಟುಹಬ್ಬ ದಿನಾಂಕ ಅದೇ ದಿನ ಅದೇ ವರ್ಷ ಅಲ್ಲ.
ಬೇಬಿ ಜೋಕ್ವಿನ್ 11:58 p.m. ಡಿಸೆಂಬರ್ 31, 2017 ರಂದು ಜನಿಸಿದರೆ, ಅವನ ಕಿರಿಯ ಅವಳಿ ಸೋದರಿ ಐತಾನಾ 18 ನಿಮಿಷಗಳ ನಂತರ ಮುಂದಿನ ವರ್ಷ 12:16 a.m.ಗೆ ಜನಿಸಿದರು.
ಎರಡು ದಿನ ಬರ್ತ್ ಡೇ ಆಚರಿಸ ಬಹುದು ಎಂದು ದಂಪತಿಗಳು ಖುಷಿಯಲ್ಲಿ ಇದ್ದಾರೆ.