ಉತ್ತರ ಪ್ರದೇಶದ ಸಹರಾನ್‌ಪುರದ ಕೊಳೆಗೇರಿಯಿಂದ ಸ್ಪೂರ್ತಿದಾಯಕವಾದ ನಿಜ ಕಥೆಯೊಂದು ಬಂದಿದೆ. ಇಬ್ಬರು ಮಕ್ಕಳು ಬಾಲ್ಯದಿಂದಲೂ ಕಸ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದರು. ಶಾಲೆ ಏನು ಕಲಿಕೆ ಅಂದರೆ ಏನು ಎಂಬ ಪರಿಜ್ಞಾನ ಇಲ್ಲದ ಇವರು ಇದೀಗ ಇಂಜಿನೀಯರ್ ಆಗಲು ಹೊರಟಿದ್ದಾರೆ. ಅವಕಾಶ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಎಲ್ಲ ಮಕ್ಕಳು ಇವರಂತೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ. ಅವರ ತಂದೆ ಬೀದಿ ವ್ಯಾಪಾರಿ. ಈ ಮಧ್ಯೆ, ಉಡಾನ್ ಎಂಬ ಸಾಮಾಜಿಕ ಸಂಸ್ಥೆ ಈ ಮಕ್ಕಳನ್ನು ನೋಡಿ ಅವರನ್ನು ಶಾಲೆಗೆ ಸೇರಿಸಿತು. ಇದೀಗ ಈ ಮಕ್ಕಳು ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

.ಮನೀಶ್ ಮತ್ತು ರೋಹನ್ ಇಬ್ಬರೂ ತಾವು ಕನಸು ಮನಸಿನಲ್ಲೂ ಅವರು ಇಂಜಿನಿಯ್ಹರಿಂಗ್ ಕಾಲೇಜಿಗೆ ಪ್ರಯಾಣ ಬೆಳೆಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇಂದು ಅವರಿಗೆ ಸಾಧ್ಯವಾಗಿದೆ. ಇದಕ್ಕಾಗಿ ಅವರು ಉಡಾನ್ ಸಂಸ್ಥೆ ಮತ್ತು ಅಜಯ್ ಸಿಂಘಾಲ್ ಅವರಿಗೆ ಧನ್ಯವಾದ ಅರ್ಪಿಸಿದರು.

saharanpur boys

ಇಂಜಿನಿಯರಿಂಗ್ ಕಾಲೇಜಿಗೆ ತಮ್ಮ ಮಕ್ಕಳ ಪ್ರವೇಶಕ್ಕೆ ಮಕ್ಕಳ ಪೋಷಕರು ಸಿದ್ಧರಿರಲಿಲ್ಲ. ಮಕ್ಕಳು ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹಣ ಸಂಪಾದಿಸುತ್ತಿದ್ದಾರೆ ಎಂದು ಅವರು ಹೇಳಿದರು. ಆದರೆ ಈಗ ಸಂಸ್ಥೆಯ ಸಹಾಯದಿಂದ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಈ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಸುಮಾರು 10 ಲಕ್ಷ ರೂ ಖರ್ಚು ಇದ್ದು ಉಡಾನ್ ಸಂಸ್ಥೆ ಪ್ರಯೋಜಕರನ್ನು ಏರ್ಪಡಿಸಿತು. ಈ ಮಕ್ಕಳಿಗೆ ಇಂಗ್ಲಿಷ್ ಕಷ್ಟಕರವಾಗಿತ್ತು. ಅದಕ್ಕಾಗಿ ಅವರಿಗೆ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿತ್ತು. ಮನೀಶ್ ಗ್ರೇಟರ್ ನೋಯ್ಡಾದ ಶಾರದಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ್ತು ರೋಹನ್ ಗುರ್ಗಾಂವ್‌ನ ವರ್ಲ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪ್ರವೇಶ ಪಡೆದಿದ್ದಾರೆ.

Leave a Reply