ಪ್ರಾಕ್ಟೀಸ್ ವೇಳೆ ಡ್ಯಾನ್ಸರ್ ಒಬ್ಬರ ಕುತ್ತಿಗೆಗೆ ಫ್ರಾಕ್ಚರ್ ಆಗಿದ್ದು, ಅವರ ಚಿಕಿತ್ಸೆಗಾಗಿ ಬಾಲಿವುಡ್ ನಟ ವರುಣ್ ಧವನ್ 5 ಲಕ್ಷ ಧನ ಸಹಾಯ ಮಾಡಿದ್ದಾರೆ..
ಇನ್ಟಾಗ್ರಾಮ್ ಪೇಜ್ totheculture ನಲ್ಲಿ ಈ ಡ್ಯಾನ್ಸರ್ ಚಿಕಿತ್ಸೆ ಗೆ ಧನ ಸಹಾಯ ಮಾಡಲು ಮುಂದೆ ಬಂದ ವರುಣ್ ಧವನ್ ರವರ ಮಾನವೀಯ ಮುಖವನ್ನು ಬಹಿರಂಗ ಪಡಿಸಲಾಗಿದೆ. ವರುಣ್ ಧವನ್ ಮೆಸೆಜ್ನ ಸ್ಕೀನ್ ಶಾಟ್ ಹಾಕಿದ ಪೇಜ್, ವರುಣ್ ಧವನ್ ಸಿನೆಮಾದಲ್ಲಿ ಮಾತ್ರ ಹೀರೋ ಅಲ್ಲ..ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ..
ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸುವುದಕ್ಕೆ ನಿಮಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಲಾಗಿದೆ. ಉತ್ತರಪ್ರದೇಶದ ಮೊರಾದಾಬಾದ್ನ ಡ್ಯಾನ್ಸರ್ ಇಶಾನ್, ಎರಡು ಕಡೆಯಿಂದ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದಾಗ ಅವರ ಕುತ್ತಿಗೆಗೆ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು.

https://www.instagram.com/p/Bxcsee8hKwa/?utm_source=ig_web_button_share_sheet

Leave a Reply