ತಮಗೆಲ್ಲರಿಗೂ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಎಂಬ ಹೆಸರಿನ ನಗರವನ್ನು ಕೇಳಿರಬಹುದು.
ಒಂದೋ ಭಾರತದ ಕ್ರಿಕೆಟ್ ತಂಡವು ಸರಣಿಯಾಡಲು ತೆರಳಿದಾಗ ಅಥವಾ ಇತರ ಕ್ರಿಕೆಟ್ ಪಂದ್ಯ ನಡೆಯುವಾಗ. ಆದರೆ ಆ ನಗರದಲ್ಲಿ ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಈ ವೀಡಿಯೋ ನೋಡಿ. ಅಲ್ಲಿ ನೀರಿನ ಅಭಾವದ ಪರಿಸ್ಥಿತಿ ಉಂಟಾಗಿದೆ. ಇದು ಗ್ಲೋಬಲ್ ವಾರ್ಮಿಂಗ್ ನ ಪ್ರಭಾವ. ಇದೇ ಪರಿಸ್ಥಿತಿ ನಾಳೆ ನಾವು ವಾಸಿಸುವ ಪ್ರದೇಶಕ್ಕೂ ಬರಬಹುದು.
ಒಂದು ಅಧ್ಯಯನದ ಪ್ರಕಾರ ಒಂದು ವೇಳೆ ಮೂರನೇ ಮಹಾಯುದ್ಧ ನಡೆಯುವುದಿದ್ದರೆ ಅದು ನೀರಿಗಾಗಿ.
ಆದ್ದರಿಂದ ನೀರಿನ ಬಳಕೆಯನ್ನು ಮಾಡುವಾಗ ಎಚ್ಚರಿಕೆ ವಹಿಸೋಣ. ಮುಂದಿನ ತಲೆಮಾರುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

Leave a Reply