ವಿಶ್ವಕಪ್ ಗೆಲ್ಲುವ ತವಕದಲ್ಲಿ ಭಾರತೀಯ ತಂಡ ಬುಧವಾರ ಇಂಗ್ಲೆಂಡ್ ಪ್ರಯಾಣಿಸಲಿದೆ. ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿದ್ದು, ಇದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ವಿಶ್ವ ಕಪ್ ಆಗಿರುತ್ತದೆ. ಎಲ್ಲ ತಂಡಗಳು ಬಲಿಷ್ಠವಾಗಿದ್ದು, ಯಾವ ತಂಡ ಯಾವಾಗ ಯಾರನ್ನು ಸೋಲಿಸಬಹುದು ಎಂದು ಹೇಳಲಾಗದು ಎಂದು ಹೇಳಿದ್ದಾರೆ.

ಪ್ರತಿಯೊಂದು ಪಂದ್ಯವನ್ನು ಬಹಳ ಸ್ಪೂರ್ತಿಯೊಂದಿಗೆ ಆಡಬೇಕಾಗುತ್ತದೆ. ನಮಗೆ ಹಲವು ಮೂಲಗಳಿಂದ ಸ್ಫೂರ್ತಿ ದೊರೆಯುತ್ತದೆ. ಆದರೆ ಭಾರತೀಯ ಸೇನೆಯಿಂದ ಅತಿಹೆಚ್ಚು ಸ್ಪೂರ್ತಿ ದೊರಕುತ್ತದೆ. ಭಾರತೀಯ ಸೇನೆಯನ್ನು ಯಾವುದಕ್ಕೂ ಹೋಲಿಕೆ ಮಾಡಲಾಗದು, ಆದರೆ ಸೇನೆಗಾಗಿ ಏನಾದರೂ ಮಾಡಬೇಕು ಎನ್ನುವ ಮನಸ್ಥಿತಿಯಿಂದ ಹೋದರೆ ನಮ್ಮ ಪ್ರದರ್ಶನ ಗುಣಮಟ್ಟದಲ್ಲಿ ಸುಧಾರಣೆ ಕಾಣಲಿದೆ. ಪ್ರತಿಯೊಬ್ಬರಿಗೂ ವಿಶ್ವಕಪ್‌ನಲ್ಲಿ ಆಡಲು ಹಲವು ರೀತಿಯಲ್ಲಿ ತಯಾರಾಗಿರುತ್ತಾರೆ ಎಂದು ಹೇಳಿದರು.

Leave a Reply