ಲಕ್ನೋ: ವಧು ಸದಾ ವಾಟ್ಸಾಪ್ ನಲ್ಲೆ ಆನ್ಲೈನ್ ಇರುತ್ತಾಳೆಂಬ ಕಾರಣಕ್ಕೆ ನಿಶ್ಚಿತಾರ್ಥವಾಗಿ ಇನ್ನೇನು ಮದುವೆ ಆಗಲಿದೆ ಎಂದಾಗ ಮದುವೆ ಮುರಿದು ಬಿದ್ದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ನಡೆಯಬೇಕಿದ್ದ ವಿವಾಹ ಸಮಾರಂಭದ ಪಾರ್ಟಿಗಾಗಿ ವರನ ಕಡೆಯವರನ್ನು ವಧು ಕುಟುಂಬದವರು ಆಹ್ವಾನಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಯಾರೂ ಬರದೇ ಇದ್ದಿದ್ದರಿಂದ ವಧುವಿನ ಕಡೆಯವರು ವಿಚಾರಿಸಿದ್ದಾರೆ. ಈ ವೇಳೆ ಸಂಬಂಧವನ್ನು ಮುಂದೆ ಕೊಂಡೊಯ್ಯಲು ಬಯಸುವುದಿಲ್ಲ ಎಂದು ವರ ಕುಟುಂಬ ತಿಳಿಸಿದೆ. ಈ ಬಗ್ಗೆ ಕಾರಣ ಕೇಳಿದಾಗ ವಧು ಹೆಚ್ಚು ಸಮಯ ವಾಟ್ಸಪ್ ಬಳಸುತ್ತಿರುತ್ತಾಳೆ ಎಂದು ಆರೋಪಿಸಿದ್ದಾರೆ.

ವಧುವಿನ ಮೇಲೆ ಹಾಕಿರುವ ಆರೋಪವನ್ನು ನಿರಾಕರಿಸಿರುವ ವಧುವಿನ ಕುಟುಂಬ, ಹುಡುಗನ ಕಡೆಯವರು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ಆ ಕಾರಣಕ್ಕಾಗಿ ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಧುವಿನ ತಂದೆ ಮೆಹಂದಿ, ವರನ ಕುಟುಂಬ ವಿವಾಹ ನಡೆಯಬೇಕಿದ್ದರೆ 65 ಲಕ್ಷ ರೂ. ವರದಕ್ಷಿಣೆ ಕೇಳಿದ್ದಾರೆ ಎಂದು ಆಪಾದಿಸಿ ಕೇಸು ದಾಖಲಿಸಿದ್ದಾರೆ.

Leave a Reply