ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸಿನಿಮಾ ಸ್ಟಾರ್ ಸೇರಿದಂತೆ ಇನ್ನೂ ಅನೇಕ ಜನಸಾಮಾನ್ಯರೂ ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ನಮ್ಮ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಬೀದರ್‌ನ ಶಾಹೀನ್ ವಿದ್ಯಾ ಸಂಸ್ಥೆಯು ಹುತಾತ್ಮರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಘೋಷಿಸಿದೆ. ಈ ಮೂಲಕ ಹುತಾತ್ಮ ಯೋಧರ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸಲಿದೆ.
“ಭಾರತ ದೇಶಕ್ಕಾಗಿ ಜೀವ ತ್ಯಾಗ ಮಾಡಿರುವ ಯೋಧರನ್ನು ಸ್ಮರಿಸುವುದು ಅವರ ಕುಟುಂಬಕ್ಕೆ ಶಕ್ತಿ ತುಂಬುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಥೆ ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಆ ವೀರ ಯೋಧರನ್ನು ಸದಾ ಸ್ಮರಿಸುತ್ತದೆ. ಹುತಾತ್ಮರ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ತ್ಯಾಗ ಬಲಿದಾನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶ ದೊರೆತರೆ ಅದೇ ನಮ್ಮ ಪಾಲಿನ ಸೌಭಾಗ್ಯ” ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯಾಗಿರುವ ಬೀದರ್‌ನ ಪ್ರಸಿದ್ಧ ಶಾಹೀನ್ ವಿದ್ಯಾ ಸಂಸ್ಥೆಯ ಡಾ. ಅಬ್ದುಲ್ ಖದೀರ್ ಹೇಳಿದರು.

ಅಬ್ದುಲ್ ಖದೀರ್ (58) ವೃತ್ತಿಯಲ್ಲಿ ಎಂಜಿನಿಯರ್ ,1989 ರಲ್ಲಿ 18 ವಿದ್ಯಾರ್ಥಿಗಳೊಂದಿಗೆ ಒಂದು ಕೋಣೆಯ ಬಾಡಿಗೆ ಪಡೆಯುವ ಮೂಲಕ ತನ್ನ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅವರ ಈ ಪ್ರಯತ್ನವು ಒಂದು ವಿಶಿಷ್ಟವಾದ ಶೈಕ್ಷಣಿಕ ಕ್ರಾಂತಿಯ ಮುಂಗಾಮಿಯಾಗಿ ಮಾರ್ಪಡಬಹುದೆಂದು ಅವರು ಎಂದಿಗೂ ಊಹಿಸಿರಲಿಲ್ಲ. ಸುಮಾರು 400 ಶಿಕ್ಷಕರಿಂದ ಮೇಲ್ವಿಚಾರಣೆ ಮಾಡಲ್ಪಟ್ಟು 11000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಮುಟ್ಟಿದೆ ,ಅವರೆಲ್ಲರು ಜ್ಞಾನ ಸಂಪತ್ತಿನ ಸೃಷ್ಟಿಗಾಗಿ ತೊಡಗಿಕೊಂಡವರು .ಈ ಜಾಲವು ಒಂಭತ್ತು ಶಾಲೆಗಳು 16 ಪದವಿಪೂರ್ವ ಮತ್ತು ಪದವಿ ಕಾಲೇಜುಗಳನ್ನು ಹಲವಾರು ನಗರಗಳಲ್ಲಿ ಹೊಂದಿದೆ .ಅವರು ಕಳೆದ 15 ವರ್ಷಗಳಲ್ಲಿ 900 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿಸಲು ಶಕ್ತರಾಗಿದ್ದಾರೆ.

Leave a Reply