ವಾಟ್ಸಪ್ ಬಳಕೆದಾರರಿಗೆ ವಾಟ್ಸಾಪ್ ಕಂಪೆನಿಯಿಂದ ಮಹತ್ವದ ಆದೇಶವೊಂದು ಬಂದಿದ್ದು, ಕೂಡಲೇ ಎಲ್ಲರೂ ತಮ್ಮ ವಾಟ್ಸಾಪ್ ಅಪ್ಡೇಟ್ ಮಾಡುವಂತೆ ಕೋರಲಾಗಿದೆ. ಯಾಕೆಂದರೆ ಇಸ್ರೇಲ್ ಮೂಲದ ಎನ್ ಎಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ವಾಟ್ಸಪ್ ಹ್ಯಾಕ್ ಮಾಡಿದ್ದು, ಸ್ಪೈವೇರ್ ಮೂಲಕ ನಿಮ್ಮ ವಾಟ್ಸಪ್ ಗೆ ಡ್ಯಾಮೇಜ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ವಾಟ್ಸಾಪ್ ಕಂಪೆನಿಗೆ ಈ ಮಾಹಿತಿ ಸಿಕ್ಕ ಕೂಡಲೇ ಈ ಸಮಸ್ಯೆಯನ್ನು ಫಿಕ್ಸ್ ಮಾಡಿ ಅದನ್ನು ಅಪ್ಡೇಟ್ ಮಾಡಿ ಬಳಕೆದಾರರ ಸುರಕ್ಷತೆಗಾಗಿ ಕೂಡಲೇ ಮಾಹಿತಿ ನೀಡಿದೆ.

ಯಾರನ್ನು ಟಾರ್ಗೆಟ್ ಮಾಡಲಾಗುತ್ತದೋ ಅವರಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ತಂತ್ರಾಂಶದ ಸಹಾಯದಿಂದ ಸ್ಪೈ ವೇರ್ ಎಂಬ ಸ್ಪೈ ಸಾಫ್ಟ್ವೇರ್ ಇನ್ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ಸ್ಟಾಲ್ ಆಗುವಂತೆ ರೂಪಿಸಲಾಗಿದೆ. ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

Leave a Reply