ಒಂದಾನೊಂದು ಕಾಲದಲ್ಲಿ ಒಬ್ಬ ಮನುಷ್ಯ ಜೀವಿಸಿದ್ದ. ಅತಿಯಾಗಿ ಪ್ರೀತಿಸಿದುದಕ್ಕಾಗಿ ಮತ್ತು ಅತಿಯಾಗಿ ಪ್ರೀತಿಸಲ್ಪಟ್ಟಿದ್ದಕ್ಕಾಗಿ ಆತನನ್ನು ಶಿಲುಬೆಗೇರಿಸಲಾಯಿತು.
ಇದನ್ನು ತಳುಕುಹಾಕುವುದು ವಿಚಿತ್ರವೆನಿಸಬಹುದು ಆದರೂ ಆತನನ್ನು ಈ ಹಿಂದೆ ಮೂರು ಸಲ ಬೇಟಿಯಾದೆ.

ಮೊದಲ ಸಲ, ಆತ ವೈಶ್ಯೆಯೊಬ್ಬಳನ್ನು ಬಂಧಿಸದಂತೆ ಪೋಲೀಸನಲ್ಲಿ ಹೇಳುತ್ತಿದ್ದ.
ಎರಡನೇ ಸಲ, ಆತ ಬಹಿಷ್ಕೃತನ ಜೊತೆ ಮಧ್ಯ ಹೀರುತ್ತಿದ್ದ.
ಮೂರನೇ ಸಲ, ಯಾವುದೋ ಆರಾದನಾ ಸ್ಥಳದಲ್ಲಿ ಧರ್ಮ ಪ್ರಚಾರಕನೊಡನೆ ಮುಷ್ಠಿಯುದ್ಧಕ್ಕಿಳಿದಿದ್ದ.

ಖಲೀಲ್ ಗಿಬ್ರಾನ್
ಅನು: ಅಪ್ಪು.

Leave a Reply